ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ‘ಅಂದದ ಅರಮನೆ’ (1982) ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಾಗ ಪತ್ರಕರ್ತರು ಶೂಟಿಂಗ್ ಸೆಟ್‌ಗೆ ಭೇಟಿ ನೀಡಿದ ಸಂದರ್ಭ. ಪತ್ರಕರ್ತ ವಿ.ಎನ್.ಸುಬ್ಬರಾವ್, ಚಿತ್ರದ ನಿರ್ದೇಶಕ ವಿ.ಸೋಮಶೇಖರ್, ಸಿನಿಮಾ ವರದಿಗಾರ ಶೇಷಾದ್ರಿ, ಛಾಯಾಗ್ರಾಹಕ ಬಿ.ಎಸ್.ಬಸವರಾಜು, ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಮೇಕಪ್ ಕಲಾವಿದ ಎಂ.ಎಸ್.ಕೇಶವ, ಸಿನಿಮಾ ಪಿಆರ್‌ಓ ಡಿ.ವಿ.ಸುಧೀಂದ್ರ. ಕುಳಿತವರು – ನಟಿಯರಾದ ಪ್ರತಿಮಾದೇವಿ, ಸುರೇಖಾ, ‘ಪ್ರಜಾಮತ’ ಪತ್ರಿಕೆ ವರದಿಗಾರ ದ್ವಾರಕಾನಾಥ್, ನಟಿ ಭಾವನಾ. ಅದಾಗಲೇ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಕನ್ನಡಿಗರೇ ಆದ ಬಿ.ಎಸ್.ಬಸವರಾಜು ಅವರಿಗೆ ಛಾಯಾಗ್ರಾಹಕರಾಗಿ ಇದು ಮೊದಲ ಕನ್ನಡ ಸಿನಿಮಾ ಆಯ್ತು.

ಪತ್ರಕರ್ತರ ಸೆಟ್ ವಿಸಿಟ್
- ಕನ್ನಡ ಸಿನಿಮಾ
Share this post