ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕಾಳಹಸ್ತಿ ಮಹಾತ್ಮ್ಯಂ

ಮದರಾಸಿನ ಎವಿಎಂ ಸ್ಟುಡಿಯೋದಲ್ಲಿ ‘ಬೇಡರ ಕಣ್ಣಪ್ಪ’ (1954) ಕನ್ನಡ ಚಿತ್ರದ ತೆಲುಗು ಅವತರಣಿಕೆ ‘ಕಾಳಹಸ್ತಿ ಮಹಾತ್ಮ್ಯಂ’ (1955) ಚಿತ್ರೀಕರಣ ಸಂದರ್ಭ. ನಿರ್ದೇಶಕ ಎಚ್‌.ಎಲ್‌.ಎನ್‌.ಸಿಂಹ, ನಟ ರಾಜಕುಮಾರ್ ಮತ್ತು ಇತರೆ ಕಲಾವಿದರು ಹಾಗೂ ತಂತ್ರಜ್ಞರು ಇದ್ದಾರೆ. ವರನಟ ಡಾ.ರಾಜ್‌ ಅವರು ನಟಿಸಿದ ಏಕೈಕ ಪರಭಾಷಾ ಚಿತ್ರವಿದು. ದಟ್ಟ ರಂಗಭೂಮಿ ಹಿನ್ನೆಲೆಯ ಎಚ್‌.ಎಲ್‌.ಎನ್‌.ಸಿಂಹ ಕನ್ನಡದ ಮೊದಲ ಸಾಮಾಜಿ ಚಿತ್ರ ‘ಸಂಸಾರ ನೌಕ’ (1936) ಚಿತ್ರದ ನಿರ್ದೇಶಕರೂ ಹೌದು. ಗುಣಸಾಗರಿ, ಅಬ್ಬಾ ಆ ಹುಡುಗಿ, ತೇಜಸ್ವಿನಿ, ಅನುಗ್ರಹ… ಅವರ ನಿರ್ದೇಶನದ ಇತರೆ ಚಿತ್ರಗಳು. ಇಂದು ಎಚ್‌.ಎಲ್‌.ಎನ್‌.ಸಿಂಹ (25/07/1904 – 02/06/2006) ಅವರ ಜನ್ಮದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು