ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಿಮಲ್ ರಾಯ್ ನೆನಪು

‘ದೇವದಾಸ್’ (1955) ಹಿಂದಿ ಚಿತ್ರದ ಪ್ರೀಮಿಯರ್ ಶೋ ಸಂದರ್ಭದಲ್ಲಿ ಸಂಗೀತ ಸಂಯೋಜಕ ಎಸ್‌.ಡಿ.ಬರ್ಮನ್‌, ನಟಿ ಸುಚಿತ್ರಾ ಸೇನ್‌, ಬಿಮಲ್ ರಾಯ್‌ ಮತ್ತು ನಟ ದಿಲೀಪ್ ಕುಮಾರ್‌. ಭಾರತೀಯ ಚಿತ್ರರಂಗದ ಪ್ರಮುಖ ಚಿತ್ರನಿರ್ದೇಶಕರೊಲ್ಲಬ್ಬರು ಬಿಮಲ್ ರಾಯ್‌. ದೋ ಬಿಘಾ ಜಮೀನ್‌, ಪರಿಣಿತಾ, ಬೀರಜ್ ಬಹು, ದೇವದಾಸ್‌, ಮಧುಮತಿ, ಸುಜಾತಾ, ಪರಾಖ್‌, ಬಂಧಿನಿ… ಅವರ ನಿರ್ದೇಶನದ ಪ್ರಮುಖ ಸಿನಿಮಾಗಳು. ಎರಡು ರಾಷ್ಟ್ರಪ್ರಶಸ್ತಿ, ಹನ್ನೊಂದು ಫಿಲ್ಮ್‌ಫೇರ್ ಪುರಸ್ಕಾರ, ಕಾನ್ಸ್‌ ಚಿತ್ರೋತ್ಸವ ಗೌರವ ಸೇರಿದಂತೆ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಇಂದು ಬಿಮಲ್ ರಾಯ್‌ (12/07/1909 – 08/01/1966) ಜನ್ಮದಿನ. (Photo Courtesy: Film History Pics)

Share this post