ಮದರಾಸಿನ ಸ್ಟುಡಿಯೋವೊಂದರಲ್ಲಿ ಆರ್.ನಾಗೇಂದ್ರ ರಾವ್ ನಿರ್ದೇಶನದ ‘ಪ್ರೇಮದ ಪುತ್ರಿ’ (1957) ಸಿನಿಮಾ ಚಿತ್ರೀಕರಣ ಸಂದರ್ಭ. ಸಹಾಯಕ ನಿರ್ದೇಶಕ ಎನ್.ಲಕ್ಷ್ಮೀನಾರಾಯಣ, ಛಾಯಾಗ್ರಾಹಕ ಕೃಷ್ಣಪ್ರಸಾದ್, ನಟಿಯರಾದ ಶ್ರೀರಂಜಿನಿ ಮತ್ತು ಸಂಧ್ಯಾ, ನಟ – ನಿರ್ದೇಶಕ ಆರ್.ನಾಗೇಂದ್ರ ರಾವ್, ಸಹಾಯಕ ನಿರ್ದೇಶಕ ನಾಗೇಶ್ ಬಾಬ (ಬಲತುದಿಯಲ್ಲಿ ಪುಸ್ತಕದಲ್ಲಿ ನೋಟ್ ಮಾಡಿಕೊಳ್ಳುತ್ತಿರುವವರು) ಇದ್ದಾರೆ. ‘ಬೆಟ್ಟದ ಕಳ್ಳ’, ‘ಪ್ರತಿಮಾ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ, ‘ಕೋಟಿ ಚೆನ್ನಯ’ ತುಳು ಚಿತ್ರಕ್ಕೆ ತಾಂತ್ರಿಕ ನಿರ್ದೇಶಕರಾಗಿ ಅವರು ದುಡಿದಿದ್ದಾರೆ. ‘ತೂಗುದೀಪ’, ‘ನನ್ನ ಕರ್ತವ್ಯ’ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದಾರೆ. ‘ಅನಿರೀಕ್ಷಿತ’ (1970) ಅವರು ನಿರ್ಮಿಸಿ, ನಿರ್ದೇಶಿಸಿದ ಸಿನಿಮಾ. ಸಹೋದರ ಅಶ್ವತ್ಥ ನಾರಾಯಣ ಅವರೊಡಗೂಡಿ ಬೆಂಗಳೂರಿನ ಗಾಂಧಿನಗರದಲ್ಲಿ ‘ಪ್ರಗತಿ’ ಸ್ಟುಡಿಯೋ ಆರಂಭಿಸಿದರು (1972). ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಿಗೆ ‘ಪ್ರಗತಿ’ಯ ಸ್ಥಿರಚಿತ್ರ ಛಾಯಾಗ್ರಾಹಣವಿದೆ. ಇಂದು (ಅಕ್ಟೋಬರ್ 06) ನಾಗೇಶ್ ಬಾಬ ಅವರ ಸಂಸ್ಮರಣಾ ದಿನ. (ಫೋಟೊ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ)

ನಾಗೇಶ್ ಬಾಬ ನೆನಪು
- ಕನ್ನಡ ಸಿನಿಮಾ
Share this post