ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬೆಸುಗೆ – ಗೀತಪ್ರಿಯ

‘ಬೆಸುಗೆ’ (1976) ಸಿನಿಮಾ ಚಿತ್ರೀಕರಣದ ಸಂದರ್ಭ. ಚಿತ್ರದ ಛಾಯಾಗ್ರಾಹಕ ಎನ್‌.ಜಿ.ರಾವ್‌ ಮತ್ತು ನಟಿ ಮಂಜುಳಾ ಅವರಿಗೆ ನಿರ್ದೇಶಕ ಗೀತಪ್ರಿಯ ಸನ್ನಿವೇಶ ವಿವರಿಸುತ್ತಿದ್ದಾರೆ. ‘ಅಶ್ವಿನಿ’ ಅವರ ಕಾದಂಬರಿ ಆಧರಿಸಿ ಅದೇ ಶೀರ್ಷಿಕೆಯಡಿ ತಯಾರಾದ ಚಿತ್ರವಿದು. ನಿರ್ದೇಶಕ ಗೀತಪ್ರಿಯ ಮತ್ತು ನಟ ಶ್ರೀನಾಥ್ ವೃತ್ತಿಬದುಕಿಗೆ ತಿರುವು ನೀಡಿದ ಪ್ರಯೋಗ. ಕನ್ನಡ ಸಿನಿಮಾ ಕಂಡ ಸದಭಿರುಚಿಯ ಚಿತ್ರನಿರ್ದೇಶಕ ಮತ್ತು ಚಿತ್ರಸಾಹಿತಿ ಗೀತಪ್ರಿಯ (15/06/1932 – 17/01/2016). ಅವರು ಇಂದು (ಜೂನ್‌ 15) ನಮ್ಮೊಂದಿಗೆ ಇದ್ದಿದ್ದರೆ 89ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು