(ಫೋಟೊ – ಬರಹ: ಪ್ರಗತಿ ಅಶ್ವತ್ಥ ನಾರಾಯಣ)
ಆರಂಭದ ದಶಕಗಳಿಂದಲೂ ಕನ್ನಡ ಚಿತ್ರರಂಗದ ಹೆಚ್ಚಿನ ಚಟುವಟಿಕೆಗಳು ಮದರಾಸಿನಲ್ಲೇ ನಡೆಯುತ್ತಿದ್ದವು. 70ರ ದಶಕದ ನಂತರದ ದಿನಗಳಲ್ಲಿ ನಿಧಾನವಾಗಿ ಕನ್ನಡದ ನೆಲದಲ್ಲೇ ಚಿತ್ರರಂಗ ಬೇರು ಬಿಡಲಾರಂಭಿಸಿತು. ಆ ಸಂದರ್ಭದಲ್ಲಿ ಚಿತ್ರರಂಗದ ಎಲ್ಲಾ ವಿಭಾಗದ ತಂತ್ರಜ್ಞರೆಲ್ಲಾ ಸೇರಿ ಅಂದು ಮದರಾಸಿನಲ್ಲಿದ್ದ CTA (Cine Technicians Association) ಮಾದರಿಯಲ್ಲಿ ಒಂದು ಸಂಘಟನೆ ಪ್ರಾರಂಭಿಸಲು ಯೋಜಿಸಲಾಯ್ತು. ಅದರ ರೂಪುರೇಷೆ ನಿರ್ಧರಿಸಲು ಏರ್‌ಲೈನ್ಸ್ ಹೋಟೆಲ್‌ನಲ್ಲಿ ಒಂದು ಸಭೆ ಕರೆದಿದ್ದರು. ಆ ಸಂದರ್ಭದಲ್ಲಿ ಸೆರೆಹಿಡಿದ ಈ ಫೊಟೋದಲ್ಲಿ ಚಿತ್ರರಂಗದ ಪ್ರಮುಖರಿದ್ದಾರೆ. ಮುಂದೆ CTA ಮಾದರಿಯ ಸಂಘಟನೆಯ ಆಲೋಚನೆ ಕೈಗೂಡಲಿಲ್ಲ. ಬೇರೆ, ಬೇರೆ ವಿಭಾಗಗಳ ಸಂಘಗಳು ಹುಟ್ಟಿಕೊಂಡವು.
1.ಈಶ್ವರ ಬಾಬು, 2.ಚಲಂ, 3.ಭಕ್ತವತ್ಸಲ, 4. ಶಿವಶಂಕರ್, 5.ಗೀತಪ್ರಿಯ, 6.ನಾಗೇಶ್ ಬಾಬ, 7. ಎಂನಾಥ್, 8.ಕುಣಿಗಲ್ ನಾಗಭೂಷಣ್, 9. ಪ್ರಭಾಕರ ಗುಪ್ತ, 10.ಎನ್.ಲಕ್ಷ್ಮೀನಾರಾಯಣ್, 11. ಎನ್.ಜಿ.ರಾವ್, 12.ಗೋಪಾಲ್, 13.ಉಮೇಶ್ ಕುಲಕರ್ಣಿ, 14.ಲಕ್ಷ್ಮಣ್, 15.ಶಂಕರಪ್ಪ, 16. ಮನೋಹರ್, 17.ಮೋಹನ ಸುಂದರಂ, 18. ಧೀರೇಂದ್ರ ಗೋಪಾಲ್, 19.ವೀರಾಸ್ವಾಮಿ, 20. ನಾಗೇಂದ್ರ ರಾವ್, 21.ಪುಟ್ಟಣ್ಣ ಕಣಗಾಲ್, 22. ವೈ.ಆರ್. ಸ್ವಾಮಿ, 23.ಎಂ.ಭಕ್ತವತ್ಸಲ, 24. ಬಿ.ಎ.ಅರಸುಕುಮಾರ್.
