‘ಕೂಡಿ ಬಾಳೋಣ’ (1975) ಚಿತ್ರದಲ್ಲಿ ಬಾಲಕೃಷ್ಣ ಮತ್ತು ದ್ವಾರಕೀಶ್. ಕನ್ನಡ ಸಿನಿಮಾ ಕಂಡ ಪ್ರಮುಖ ಹಾಸ್ಯನಟರಲ್ಲೊಬ್ಬರು ದ್ವಾರಕೀಶ್. ‘ವೀರಸಂಕಲ್ಪ’ (1964) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಅವರು ಮುಂದೆ ಸಾಲು, ಸಾಲು ಚಿತ್ರಗಳ ಮೂಲಕ ಜನಪ್ರಿಯ ಹಾಸ್ಯನಟನಾಗಿ ಬೆಳೆದರು. ‘ಮಮತೆಯ ಬಂಧನ’ (1965) ಚಿತ್ರದೊಂದಿಗೆ ಚಿತ್ರನಿರ್ಮಾಣದಲ್ಲೂ ತೊಡಗಿಸಿಕೊಂಡ ಅವರು ತಮ್ಮ ಸಂಸ್ಥೆಯಿಂದ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಪಟ್ಟಿಯಲ್ಲಿ ತಮಿಳು, ತೆಲುಗು, ಹಿಂದಿ ಚಿತ್ರಗಳೂ ಇವೆ. 20ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹೊಸತನಕ್ಕಾಗಿ ತುಡಿಯುತ್ತಿದ್ದ ದ್ವಾರಕೀಶ್ ಚಿತ್ರನಿರ್ಮಾಣದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದವರು. ಇಂದು (ಆಗಸ್ಟ್ 19) ಅವರ 79ನೇ ಹುಟ್ಟುಹಬ್ಬ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ದ್ವಾರಕೀಶ್ – 79
- ಕನ್ನಡ ಸಿನಿಮಾ
Share this post