ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಅರುಂಧತಿ ನಾಗ್ – 65

‘ನಾಗಮಂಡಲ’ (1989) ನಾಟಕದಲ್ಲಿ ಶಂಕರ್‌ನಾಗ್ ಮತ್ತು ಅರುಂಧತಿ ನಾಗ್‌. ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ರಚನೆಯ ಈ ಜನಪ್ರಿಯ ನಾಟಕವನ್ನು ಶಂಕರ್‌ನಾಗ್‌ ರಂಗಕ್ಕೆ ಅಳವಡಿಸಿದ್ದರು. ಅರುಂಧತಿ ನಾಗ್‌ ಕಳೆದ 40 ವರ್ಷಗಳಿಂದ ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಪಾ’ ಹಿಂದಿ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರಪ್ರಶಸ್ತಿ, ಎರಡು ಬಾರಿ (ಆಕ್ಸಿಡೆಂಟ್‌ ಮತ್ತು ಜೋಗಿ ಚಿತ್ರಗಳಿಗೆ) ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಶಂಕರ್‌ನಾಗ್‌ ನೆನಪಿನಲ್ಲಿ ಅವರು ನಿರ್ಮಿಸಿದ ‘ರಂಗಶಂಕರ’ ರಂಗಮಂದಿರ ಕನ್ನಡ ರಂಗಭೂಮಿಗೆ ವಿಶಿಷ್ಟ ಕೊಡುಗೆ. ಇಂದು (ಜುಲೈ 6) ಅವರಿಗೆ 65 ತುಂಬಿತು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು