ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಎಂ.ಎಸ್.ಸತ್ಯು – 91

‘ಗರಂ ಹವಾ’ (1973) ಹಿಂದಿ ಸಿನಿಮಾ ಚಿತ್ರೀಕರಣದಲ್ಲಿ ನಿರ್ದೇಶಕ ಎಂ.ಎಸ್‌.ಸತ್ಯು, ಕಲಾವಿದರಾದ ಗೀತಾ ಸಿದ್ದಾರ್ಥ್‌ ಮತ್ತು ಜಲಾಲ್ ಆಘಾ. ಭಾರತ – ಪಾಕಿಸ್ತಾನ ದೇಶ ವಿಭಜನ ಹಿನ್ನೆಲೆಯ ಕಥಾವಸ್ತುವಿನ ‘ಗರಂ ಹವಾ’ ಸಾರ್ವಕಾಲಿಕ ಶ್ರೇ‍ಷ್ಠ ಹಿಂದಿ ಚಿತ್ರಗಳಲ್ಲೊಂದು. ಹೊಸ ಅಲೆಯ ಚಿತ್ರಗಳ ಯಾದಿಯಲ್ಲಿ ಗಮನಾರ್ಹ ಪ್ರಯೋಗ. ರಾಷ್ಟ್ರಪ್ರಶಸ್ತಿ ಮತ್ತು ಮೂರು ಫಿಲ್ಮ್‌ಫೇರ್‌ ಪುರಸ್ಕಾರ ಪಡೆದ ಸಿನಿಮಾ ಪ್ರಮುಖ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿದೆ. ಚಿತ್ರದ ನಿರ್ದೇಶಕ ಮೈಸೂರು ಶ್ರೀನಿವಾಸ ಸತ್ಯು (ಎಂ.ಎಸ್‌.ಸತ್ಯು) ಇಂದು (ಜುಲೈ 6) 91ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರನಿರ್ದೇಶಕ, ನಾಟಕಕಾರ, ಕಲಾ ನಿರ್ದೇಶಕ ಸತ್ಯು ಅವರು ಪದ್ಮಶ್ರೀ ಪುರಸ್ಕೃತರು. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು