ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

‘ಜಂಬೂಸವಾರಿ’ ಮುಹೂರ್ತ

ಕೆ.ಎಸ್‌.ಎಲ್‌.ಸ್ವಾಮಿ ನಿರ್ಮಾಣ – ನಿರ್ದೇಶನದ ‘ಜಂಬೂಸವಾರಿ’ (1993) ಸಿನಿಮಾ ಮುಹೂರ್ತದ ಸಂದರ್ಭ. ಕಂಠೀರವ ಸ್ಟುಡಿಯೋದಲ್ಲಿ ಮಾಸ್ಟರ್ ಜಯಂತ್‌ ನಟನೆಯ ಮೊದಲ ದೃಶ್ಯಕ್ಕೆ ಪತ್ರಕರ್ತೆ – ಲೇಖಕಿ ಡಾ.ವಿಜಯಮ್ಮ ಕ್ಲ್ಯಾಪ್ ಮಾಡಿದ್ದರು. ಲೇಖಕಿ, ರಂಗಕರ್ಮಿ, ಪತ್ರಕರ್ತೆ ವಿಜಯಮ್ಮ ಸಾಮಾಜಿಕ ಹೋರಾಟಗಾರ್ತಿಯಾಗಿ ಹತ್ತಾರು ಚಳುವಳಿಗಳಲ್ಲಿ ಪಾಲ್ಗೊಂಡವರು. ಹಲವು ಪತ್ರಿಕೆಗಳಲ್ಲಿ ವಿಶಿಷ್ಟ ಅಂಕಣ – ಬರಹಗಳ ಮೂಲಕ ಸಿನಿಮಾ ಪತ್ರಿಕೋದ್ಯಮದಲ್ಲಿ ಹೊಸತನ ತಂದ ಹೆಗ್ಗಳಿಕೆ ಅವರದು. (ಫೊಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು