ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಕಿಶೋರ್ ಕುಮಾರ್ – ಸಂಗೀತಾ ಕಟ್ಟಿ

ಕಿಶೋರ್ ಕುಮಾರ್ – ಸಂಗೀತಾ ಕಟ್ಟಿ

ಧಾರವಾಡದ ಕಲಾಭವನದಲ್ಲಿ ‘ಮ್ಯೂಸಿಕಲ್‌ನೈಟ್‌’ ಕಾರ್ಯಕ್ರಮಕ್ಕೆ ಹಾಡಲು ಬಂದಿದ್ದ ಹಿಂದಿ ಚಿತ್ರರಂಗದ ಮೇರು ಗಾಯಕ ಕಿಶೋರ್‌ಕುಮಾರ್ ಅವರನ್ನು ಬಾಲಕಿ ಸಂಗೀತ ಕಟ್ಟಿ (ಆಗ ಅವರಿಗೆ ಹತ್ತು ವರ್ಷ) ಹೂಗುಚ್ಛ ನೀಡಿ ಸ್ವಾಗತಿಸಿದ ಅಪರೂಪದ ಸಂದರ್ಭವಿದು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಉನ್ನತ ಸಾಧನೆ ಮಾಡಿರುವ ಸಂಗೀತಾ ಕಟ್ಟಿ ಅವರು ನಾಡಿನ ಅಪರೂಪದ ಗಾಯಕಿ. ಶಾಸ್ತ್ರೀಯ ಗಾಯನ, ಜನಪದ, ಭಕ್ತಿಗೀತೆ, ಭಾವಗೀತೆ, ಚಿತ್ರಗೀತೆ.. ಪ್ರಕಾರಗಳಲ್ಲಿ ಸಂಗೀತ ಪ್ರಿಯರಿಗೆ ಚಿರಪರಿಚಿತ ಧ್ವನಿ ಸಂಗೀತಾ ಕಟ್ಟಿ ಅವರದು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು