ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಹಿನ್ನೆಲೆ ಅರಿಯದ ಸೆಟ್‌ನವರು ಕಕ್ಕಾಬಿಕ್ಕಿ!

ಪೋಸ್ಟ್ ಶೇರ್ ಮಾಡಿ
ಬಿ.ಜಯಾ, ನಟಿ

ಆರಂಭದಲ್ಲಿ ಕನ್ನಡ ಸಿನಿಮಾಗಳು ತಯಾರಾಗುತ್ತಿದ್ದುದು ಮದರಾಸಿನಲ್ಲಿ. ಕನ್ನಡದ ಕಲಾವಿದರೆಲ್ಲರೂ ಅಲ್ಲಿಯೇ ಬೀಡುಬಿಟ್ಟಿದ್ದರು. ಆಗ ನಾನು ನಟಿ ಲೀಲಾವತಿ ಅವರೊಂದಿಗಿದ್ದೆ. ದೂರದ ಊರಿನಲ್ಲಿ ಆಶ್ರಯ ಕೊಟ್ಟಿದ್ದ ಲೀಲಮ್ಮನೆಂದರೆ ನನಗೆ ಅತಿಯಾದ ಅಕ್ಕರೆ. ಚಿಕ್ಕವಳಾದ ನಾನೆಂದರೆ ಲೀಲಾವತಿ ಅವರಿಗೂ ಪ್ರೀತಿ. ಲೀಲಾವತಿ ಅವರನ್ನು ನಾನು `ಅಕ್ಕ ಅಕ್ಕ’ ಎಂದೇ ಕರೆಯುತ್ತಿದ್ದುದು. ಕೆಲವೊಮ್ಮೆ ಕ್ಯಾಮರಾ ಎದುರೂ `ಅಕ್ಕ’ ಎಂದು ಕರೆದು ನಿರ್ದೇಶಕರಿಂದ ಬಯ್ಯಿಸಿಕೊಳ್ಳುತ್ತಿದ್ದುದೂ ಇತ್ತು!

ಅದೊಮ್ಮೆ ಮದರಾಸಿನ ಸ್ಟುಡಿಯೋದಲ್ಲಿ `ವೀರಕೇಸರಿ’ ಚಿತ್ರದ ಸನ್ನಿವೇಶವೊಂದನ್ನು ಚಿತ್ರಿಸಲಾಗುತ್ತಿತ್ತು. ಚಿತ್ರದಲ್ಲಿ ಲೀಲಾವತಿ ಅಕ್ಕ ರಾಜಕುಮಾರಿ. ಸಖಿಯಾಗಿ ನಾನು ನಟಿಸುತ್ತಿದ್ದೆ. ಸನ್ನಿವೇಶವೊಂದರಲ್ಲಿ ನನ್ನ ಕೆನ್ನೆಗೆ ಲೀಲಾವತಿ ಅಕ್ಕ ಹೊಡೆಯಬೇಕಿತ್ತು. ಆಕಸ್ಮಾತಾಗಿ ಏಟು ಸ್ವಲ್ಪ ಜೋರಾಗಿಯೇ ಬಿತ್ತು. ಸದಾ `ಅಕ್ಕ’ ಎನ್ನುತ್ತಿದ್ದ ನಾನು ಆಗ `ಅಮ್ಮ’ ಎಂದುಬಿಟ್ಟೆ! ಮರುಕ್ಷಣವೇ ಏನೋ ನೆನಪಿಸಿಕೊಂಡಂತೆ ನಾನು, ಲೀಲಾವತಿ ಅಕ್ಕ ನಗತೊಡಗಿದೆವು. ಇದರ ಹಿನ್ನೆಲೆ ಅರಿಯದ ಸೆಟ್‍ನವರು ಕಕ್ಕಾಬಿಕ್ಕಿ!

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಕ್ಯಾಮರ ಕಣ್ಣಲ್ಲಿ ಲವ್‌ಸ್ಟೋರಿ!

ಎಚ್.ಎಲ್.ಎನ್.ಸಿಂಹ ನಿರ್ದೇಶನದ `ಅಬ್ಬಾ ಆ ಹುಡುಗಿ’ (1959) ಸಿನಿಮಾ ತಯಾರಾಗುತ್ತಿದ್ದ ಸಂದರ್ಭ. ಮದ್ರಾಸ್‍ನ ವಾಹಿನಿ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿತ್ತು. ನಿರ್ದೇಶಕ

ಮಹಿರಾವಣನ ಮೀಸೆಗೇ ಸವಾಲು!

ರಟ್ಟಿಹಳ್ಳಿ ನಾಗೇಂದ್ರರಾಯರು ಕನ್ನಡ ಚಿತ್ರರಂಗದಲ್ಲಿ `ಆರ್‍ಎನ್‍ಆರ್’ ಎಂದೇ ಖ್ಯಾತರಾದವರು. ಮಾತಿನ ಯುಗಕ್ಕೂ ಮುನ್ನ ಮೂಕಿ ಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಅವರದು.

ಬಾವಾಜಿ ಮೇಕಪ್‌ಗೆ 5 ರೂ. ಇನಾಮು!

ಕನ್ನಡ ಸಿನಿಮಾ ಮೇಕಪ್ ಕಲೆಯಲ್ಲಿ ಎಂ.ಎಸ್‌.ಕೇಶವರ ಅವರದ್ದು ಚಿರಪರಿಚಿತ ಹೆಸರು. ತಂದೆ, ಮೇಕಪ್ ಕಲಾವಿದ ಎಂ.ಎಸ್‌.ಸುಬ್ಬಣ್ಣ ಅವರೇ ಕೇಶವರಿಗೆ ಮೊದಲ