ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಾಲಣ್ಣ ನೆರವಿಗೆ ಬಂದರು…

ಪೋಸ್ಟ್ ಶೇರ್ ಮಾಡಿ
ಬ್ಯಾಂಕ್ ಜನಾರ್ಧನ, ನಟ

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಬಾಲಕೃಷ್ಣ ಅವರೊಂದಿಗೆ ಚಿತ್ರವೊಂದರಲ್ಲಿ ನಟಿಸುವ ಪುಟ್ಟ ಅವಕಾಶ ಸಿಕ್ಕಿತ್ತು. ಆಗಿನ್ನೂ ನಾನು ಸಿನಿಮಾಗೆ ಹೊಸಬ. (ಆ ಚಿತ್ರದ ಹೆಸರು, ನಿರ್ದೇಶಕರ ಮಾಹಿತಿ ಸದ್ಯಕ್ಕೆ ಬೇಡ). ಶೂಟಿಂಗ್ ವೇಳೆ ನಿರ್ದೇಶಕರು ಆ್ಯಕ್ಷನ್ ಹೇಳುತ್ತಿದ್ದಂತೆ ಬಾಲಣ್ಣ ಒಂದೇ ಟೇಕ್‍ನಲ್ಲಿ ತಮ್ಮ ಪಾಲಿನ ಉದ್ದನೆಯ ಡೈಲಾಗ್ ಒಪ್ಪಿಸಿದರು. ನಂತರ ಸಂಭಾಷಣೆ ಹೇಳಬೇಕಿದ್ದ ನಾನು ತಡವರಿಸಿದೆ. ಕೂಡಲೇ ಬಾಲಣ್ಣ ಅವರಿಗೆ ಏನನ್ನಿಸಿತೋ, ನನ್ನ ಸಂಭಾಷಣೆಯನ್ನೂ ಹೇಳಿಬಿಟ್ಟರು!

ಕಸಿವಿಸಿಗೊಂಡ ನಿರ್ದೇಶಕರು, `ಸರ್ ಅವರ ಡೈಲಾಗ್ ನೀವೇಕೆ ಹೇಳಿದಿರಿ?’ ಎಂದರು. `ನೀವು ಅಷ್ಟು ವೇಗವಾಗಿ ಹೇಳಿಕೊಟ್ಟರೆ ಆ ಹುಡುಗನಿಗೆ ಹೇಗೆ ಅರ್ಥವಾಗಬೇಕು? ಹೊಸಬರಿಗೆ ಪಾತ್ರ ಹೇಳಿಕೊಡುವಾಗ ನಿಮಗೆ ಸಮಾಧಾನ ಇರಬೇಕು. ಕಲಾವಿದರಿಗೆ ಸಂದರ್ಭ, ಸನ್ನಿವೇಶ ವಿವರಿಸುವುದು ಬೇಡವೇ?’ ಎಂದು ಬಾಲಣ್ಣ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ಆಗಷ್ಟೇ ಕಲಾವಿದರಾಗಿ ಕಣ್ಣು ಬಿಡುತ್ತಿದ್ದ ನಮ್ಮ ನೆರವಿಗೆ ಬಾಲಣ್ಣ ನಿಂತಿದ್ದರು! ಇದು ನಿರ್ದೇಶಕರು ಸೇರಿದಂತೆ ನಮಗೂ ಪಾಠವಾಯ್ತು.

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಶಶಿ ಸಾಬ್ ಪಕ್ಕ ಕುಳಿತ ರೋಮಾಂಚನ!

ಕನ್ನಡದ ಹಿರಿಯ ಸಿನಿಮಾ ಛಾಯಾಗ್ರಾಹಕ ಬಿ.ಎಸ್‌.ಬಸವರಾಜ್‌ ವೃತ್ತಿಬದುಕಿನ ಆರಂಭದಲ್ಲಿ ಹಿಂದಿ ಚಿತ್ರಗಳಿಗೆ ಕೆಲಸ ಮಾಡಿದ್ದರು. ಆಗೊಮ್ಮೆ ನಟ ಶಶಿಕಪೂರ್‌ ಅವರೊಂದಿಗೆ

ಪ್ರಕಾಶ್ ರೈ ಮೇಷ್ಟ್ರಾಗಿದ್ದು!

ಹಾಗೆ ನೋಡಿದರೆ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರೂ ಪ್ರಕಾಶನಿಗೂ ಮಲಯಾಳಂ ಸರಿಯಾಗಿ ಗೊತ್ತಿಲ್ಲ. ಆದರೆ ಭಾಷೆಯ ಬಗ್ಗೆ ತಿಳಿವಳಿಕೆ ಇತ್ತಷ್ಟೆ. ನಟಿ

ಡೆಲ್ಲಿ ಪೂರಾ ಸುತ್ನಾ..!

ಆಟೋ ಹತ್ತಿ ಕುಳಿತ ನಂತರ ವಜ್ರಮುನಿ, `ಸಾಠ್ ಅಂದರೆ ಎಷ್ಟೋ?’ ಎಂದು ತನ್ನ ಜತೆಗಿದ್ದವರನ್ನು ಕೇಳಿದ್ದಾನೆ. ಅರವತ್ತು ಎಂದು ಗೊತ್ತಾಗುತ್ತಿದ್ದಂತೆ