ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸರಿಯಾಗಿ ಚಾಮರ ಬೀಸೋಕೂ ಬರೋಲ್ವೆ?

ಪೋಸ್ಟ್ ಶೇರ್ ಮಾಡಿ
ಸಿ.ವಿ.ಶಿವಶಂಕರ್‌
ಚಿತ್ರಸಾಹಿತಿ

ಸೀನ್ ಕಂಟ್ಯೂನಿಟಿಗೆ ತೊಂದರೆಯಾಯ್ತು. ನಿರ್ದೇಶಕರು ಬೇಡಿಕೊಂಡರೂ ಸಖಿಯ ಕೋಪ ತಣ್ಣಗಾಗಲಿಲ್ಲ. ಕ್ಯಾಮರಾಮನ್ ಖುದ್ದಾಗಿ ಬಂದು ಕ್ಷಮೆಯಾಚಿಸುವವರೆಗೂ ಬರೋಲ್ಲ ಎಂದು ಆಕೆ ಪಟ್ಟು ಹಿಡಿದಳು. ಭರ್ಜರಿ ಮೇಕಪ್‌ನಲ್ಲಿದ್ದ ನಾಗೇಂದ್ರರಾಯರು ಸೆಖೆ ತಾಳಲಾರದೆ ಒದ್ದಾಡುತ್ತಿದ್ದರು.

`ವೀರಕೇಸರಿ’ ಚಿತ್ರದ ಒಂದು ಸನ್ನಿವೇಶ. ಮಹಾರಾಜನ ಪಾತ್ರದಲ್ಲಿ ನಾಗೇಂದ್ರರಾಯರು ಸಿಂಹಾಸನದ ಮೇಲೆ ಕುಳಿತಿರುತ್ತಾರೆ. ಅವರ ಅಕ್ಕ – ಪಕ್ಕ ನಿಂತ ಇಬ್ಬರು ಸಖಿಯರು ಚಾಮರ ಬೀಸಬೇಕು. `ವಿಪರೀತ ಸೆಖೆ. ಸ್ಟುಡಿಯೋದಲ್ಲಿ ಫ್ಯಾನ್‌ಗಳೂ ಇಲ್ಲ. ನೀವು ಸ್ವಲ್ಪ ಜೋರಾಗಿ ಚಾಮರ ಬೀಸ್ರಮ್ಮಾ..’ ಎಂದು ಸಖಿಯರ ಪಾತ್ರಗಳಲ್ಲಿದ್ದ ನಟಿಯರಿಗೆ ನಟ ನಾಗೇಂದ್ರರಾಯರು ಮೊದಲೇ ಹೇಳಿದ್ದರು. ನಿರ್ದೇಶಕರು ಆ್ಯಕ್ಷನ್ ಎನ್ನುತ್ತಿದ್ದಂತೆ ಶೂಟಿಂಗ್ ಶುರುವಾಯಿತು. ಚಾಮರ ಬೀಸುತ್ತಿದ್ದ ಸಖಿಯೊಬ್ಬಳು ಫ್ರೇಮ್‌ನಿಂದ ಹೊರಗಿದ್ದಳೆಂದು ಕಾಣುತ್ತದೆ. ಕೋಪಗೊಂಡ ಕ್ಯಾಮರಾಮನ್, `ನಿಂಗೆ ಸರಿಯಾಗಿ ಚಾಮರ ಬೀಸೋಕೂ ಬರೋಲ್ವೆ? ನಿಮ್ಮನ್ನು ಎಲ್ಲಿಂದ ಹಿಡ್ಕೊಂಡು ಬಂದಿದಾರೆ’ ಎಂದು ಬಡಬಡಿಸಿದ. ಸಿಟ್ಟು ಮಾಡಿಕೊಂಡ ಸಖಿ ಚಾಮರ ಕೆಳಗಿಟ್ಟು ಹೊರಟೇ ಹೋದಳು!

ಇದೀಗ ಸೀನ್ ಕಂಟ್ಯೂನಿಟಿಗೆ ತೊಂದರೆಯಾಯ್ತು. ನಿರ್ದೇಶಕರು ಬೇಡಿಕೊಂಡರೂ ಸಖಿಯ ಕೋಪ ತಣ್ಣಗಾಗಲಿಲ್ಲ. ಕ್ಯಾಮರಾಮನ್ ಖುದ್ದಾಗಿ ಬಂದು ಕ್ಷಮೆಯಾಚಿಸುವವರೆಗೂ ಬರೋಲ್ಲ ಎಂದು ಆಕೆ ಪಟ್ಟು ಹಿಡಿದಳು. ಭರ್ಜರಿ ಮೇಕಪ್‌ನಲ್ಲಿದ್ದ ನಾಗೇಂದ್ರರಾಯರು ಸೆಖೆ ತಾಳಲಾರದೆ ಒದ್ದಾಡುತ್ತಿದ್ದರು. ಇಂಥ ಹೊತ್ತಿನಲ್ಲೂ ನಟ ಬಾಲಕೃಷ್ಣ ತಮಾಷೆ ಮಾಡುವುದನ್ನು ಬಿಡಲಿಲ್ಲ. `ಏನ್ ನಾಗೇಂದ್ರರಾಯರೇ, ನಿಮಗೆ ನಿಮ್ಮ ಪಕ್ಕದಲ್ಲಿರೋ ಸಖಿಯರನ್ನು ಸರಿಯಾಗಿ ಇಟ್ಕೊಳ್ಳೋಕೆ ಆಗೋಲ್ವೇ!?’ ಎಂದು ಛೇಡಿಸಿದರು ಬಾಲಣ್ಣ. ಸಿಂಹಾಸನದಿಂದ ಇಳಿದ ರಾಯರು ನೇರವಾಗಿ ಕ್ಯಾಮರಾಮನ್ ಎದುರು ಹೋಗಿ ನಿಂತರು. ಅವರ ಕೋಪ ಅರಿತ ಕ್ಯಾಮರಾಮನ್ ತಾನೇ ಖುದ್ದಾಗಿ ಓಡಿ ಹೋಗಿ ಸಖಿಯ ಕ್ಷಮೆಯಾಚಿಸಿದ. ಬಹಳಷ್ಟು ಹೊತ್ತಿನವರೆಗೆ ನಡೆದ ಈ ಡ್ರಾಮಾ ನಂತರ ಕೊನೆಗೂ ಶೂಟಿಂಗ್‌ಗೆ ಚಾಲನೆ ಸಿಕ್ಕಿತು.

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ದಾರಿಯುದ್ದಕ್ಕೂ ಜನ ಸೆಲ್ಯೂಟ್ ಹೊಡೆದರು!

ಡಾ.ರಾಜಕುಮಾರ್ ಅಭಿನಯದ `ದ್ರುವತಾರೆ’ ಚಿತ್ರದಲ್ಲಿ ನನಗೆ ಪೊಲೀಸ್‌ ಇನ್‍ಸ್ಪೆಕ್ಟರ್ ಪಾತ್ರವಿತ್ತು. ಕೆಂಗೇರಿ ಮತ್ತು ರಾಮನಗರ ಮಧ್ಯೆಯಿದ್ದ ಗ್ರಾಮವೊಂದರಲ್ಲಿ ಶೂಟಿಂಗ್. ಈ

ನನ್ನ ಚೋಮ, ಕರಿಯ ಚೋಮ!

ಹಿರಿಯ ಮೇಕಪ್ ಕಲಾವಿದ ಎನ್.ಕೆ.ರಾಮಕೃಷ್ಣ ಅವರ ಬಣ್ಣದ ಬದುಕಿಗೀಗ ನಾಲ್ಕು ದಶಕ. ಕಲಾತ್ಮಕ, ಕಮರ್ಷಿಯಲ್ ಎರಡೂ ಶೈಲಿಯ ಚಿತ್ರಗಳಲ್ಲಿ ಅವರದು

‘ಡಮ್ಮಿ’ ಜೊತೆ ನಿಜ ಕಲ್ಲುಗಳನ್ನೂ ಬೀಸಿದರು!

ಸಿದ್ದಲಿಂಗಯ್ಯ ನಿರ್ದೇಶನದ ‘ಹೇಮಾವತಿ’ ಕಥಾವಸ್ತುವಿನ ದೃಷ್ಟಿಯಿಂದ ಮಹತ್ವದ ಚಿತ್ರವಾಗಿ ದಾಖಲಾಗಿದೆ. ಚಿತ್ರದ ಹಲವು ಸನ್ನಿವೇಶಗಳಲ್ಲಿ ನಟ-ನಟಿಯರ ಜೊತೆ ಸ್ಥಳೀಯರೂ ಪಾತ್ರಧಾರಿಗಳಾಗಿದ್ದಾರೆ.