ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಚಕ್ರವ್ಯೂಹ – ಇನ್‌ಕ್ವಿಲಾಬ್‌

ವೀರಾಸ್ವಾಮಿ ನಿರ್ಮಾಣದಲ್ಲಿ ವಿ.ಸೋಮಶೇಖರ್ ನಿರ್ದೇಶಿಸಿದ್ದ ‘ಚಕ್ರವ್ಯೂಹ’ (1983) ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಅಂಬರೀಶ್‌ ಅವರ ರೆಬೆಲ್‌ಸ್ಟಾರ್ ಇಮೇಜು ವೃದ್ಧಿಸಿದ ಚಿತ್ರವಿದು. ಮರುವರ್ಷ ಈ ಚಿತ್ರವನ್ನು ವೀರಾಸ್ವಾಮಿಯವರು ‘ಇನ್‌ಕ್ವಿಲಾಬ್‌’ (1984) ಶೀರ್ಷಿಕೆಯಡಿ ಹಿಂದಿಯಲ್ಲಿ ನಿರ್ಮಿಸಿದರು. ಮದರಾಸಿನ ವಾಹಿನಿ ಸ್ಟುಡಿಯೋದಲ್ಲಿ ನಡೆದ ‘ಇನ್‌ಕ್ವಿಲಾಬ್‌’ ಮುಹೂರ್ತದ ಸಂದರ್ಭದ ಫೋಟೋ ಇದು. ಅಮಿತಾಭ್ ಬಚ್ಚನ್‌, ಅಂಬರೀಶ್, ರವಿಚಂದ್ರನ್‌, ಅಶೋಕ್, ಮೇಕಪ್ ಕಲಾವಿದ ಎಂ.ಎಸ್.ಕೇಶವ ಫೋಟೋದಲ್ಲಿದ್ದಾರೆ.

Share this post