ನಂದಿಬೆಟ್ಟದಲ್ಲಿ ಸಿನಿಮಾ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಚಿತ್ರನಿರ್ದೇಶಕ – ಚಿತ್ರಸಾಹಿತಿ ಗೀತಪ್ರಿಯ ಅವರೊಂದಿಗೆ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ. ಚಿಕ್ಕಬಳ್ಳಾಪುರ ಭವಾನಿ ಸ್ಟುಡಿಯೋದ ಲಕ್ಷ್ಮೀನಾರಾಯಣ ಅವರು 50 – 60ರ ದಶಕಗಳಲ್ಲಿ ಮದರಾಸಿನ ಸ್ಟುಡಿಯೋಗಳಿಗೆ ಹೋಗಿ ಅಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ಕನ್ನಡ ಸಿನಿಮಾಗಳ ಫೋಟೋಗಳನ್ನು ಕನ್ನಡಿಗರಿಗೆ ತಲುಪಿಸುತ್ತಿದ್ದರು. ಅವರ ಭವಾನಿ ಸ್ಟುಡಿಯೋದಲ್ಲಿ ನಟ-ನಟಿಯರು, ತಂತ್ರಜ್ಞರ ನೂರಾರು ಫೋಟೋಶೂಟ್‌ಗಳು ನಡೆದಿವೆ. ಇಂದು ಭವಾನಿ ಲಕ್ಷ್ಮೀನಾರಾಯಣ ಅವರು 87ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಭವಾನಿ ಲಕ್ಷ್ಮೀನಾರಾಯಣ – 87
- ಕನ್ನಡ ಸಿನಿಮಾ
Share this post