ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟಿ ಜಮುನಾ – 85

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಸಾಕ್ಷಾತ್ಕಾರ’ (1971) ಚಿತ್ರದಲ್ಲಿ ಡಾ.ರಾಜಕುಮಾರ್ ಮತ್ತು ಜಮುನಾ. ತಮ್ಮ ಹದಿನಾರರ ಹರೆಯದಲ್ಲಿ ‘ಪುಟ್ಟಿಲ್ಲು’ (1953) ತೆಲುಗು ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಜಮುನಾಗೆ ‘ಮಿಸ್ಸಮ್ಮ’ (1955) ತೆಲುಗು ಸಿನಿಮಾ ವೃತ್ತಿಬದುಕಿಗೆ ದೊಡ್ಡ ತಿರುವು ನೀಡಿತು. ಪ್ರಮುಖವಾಗಿ ತೆಲುಗು ಹಾಗೂ ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳ 175ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಆದರ್ಶ ಸತಿ, ತೆನಾಲಿ ರಾಮಕೃಷ್ಣ, ಭೂಕೈಲಾಸ, ರತ್ನಗಿರಿ ರಹಸ್ಯ, ಸಾಕ್ಷಾತ್ಕಾರ, ಮಾಯೆಯ ಮುಸುಕು… ಅವರ ಕೆಲವು ಪ್ರಮುಖ ಕನ್ನಡ ಚಿತ್ರಗಳು. ಇಂದು (ಆಗಸ್ಟ್‌ 30) ಅವರ 85ನೇ ಜನ್ಮದಿನ.

Share this post