ಇದು `ಗುರು ಶಿಷ್ಯರು’ (1981) ಸಿನಿಮಾದ ಸ್ಟಿಲ್. ದ್ವಾರಕೀಶ್ ಜೊತೆ ಗಣಪನ ವೇಷದಲ್ಲಿರೋದು ಹಾಸ್ಯನಟ ಗೋಡೆ ಲಕ್ಷ್ಮೀನಾರಾಯಣ (ಒಳಚಿತ್ರ). ಶೇಕ್ಸ್‘ಪಿಯರ್ ಕೃತಿ `ಮಿಡ್ ಸಮ್ಮರ್ ನೈಟ್ ಡ್ರೀಮ್ಸ್’ ನಾಟಕದ ಕನ್ನಡ ಅವತರಣಿಕೆಯಲ್ಲಿ ಇವರು `ಗೋಡೆ’ ಪಾತ್ರ ನಿರ್ವಹಿಸುತ್ತಿದ್ದರು. ಈ ಪಾತ್ರ ಜನಪ್ರಿಯವಾಗುತ್ತಿದ್ದಂತೆ ಅವರ ಹೆಸರಿನ ಹಿಂದೆ `ಗೋಡೆ’ ಸೇರಿಕೊಂಡಿತು. `ಕಾಲೇಜು ರಂಗ’ (1976) ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಅವರು `ಮಲಯ ಮಾರುತ’, `ದಂಗೆಯೆದ್ದ ಮಕ್ಕಳು’ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ಹಾಸ್ಯನಟನಾಗಿ ಅಭಿನಯಿಸಿದ್ದಾರೆ. ಹೋಟೆಲ್ ಉದ್ಯಮಿಯಾಗಿದ್ದ ಅವರಿಗೆ ನಟನೆ ಹವ್ಯಾಸವಾಗಿತ್ತಷ್ಟೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಗೋಡೆ ಗಣಪ!
- ಕನ್ನಡ ಸಿನಿಮಾ
Share this post