ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬೂತಯ್ಯನ ಮಗ ಅಯ್ಯು – ಲೋಕೇಶ್‌

‘ಬೂತಯ್ಯನ ಮಗ ಅಯ್ಯು’ (1974) ಚಿತ್ರದ ಬಿಡುಗಡೆ ಸಂದರ್ಭ. ಚಿತ್ರದ ಛಾಯಾಗ್ರಾಹಕ ಡಿ.ವಿ.ರಾಜಾರಾಂ, ನಟ ಲೋಕೇಶ್‌ರ ಹಿರಿಯ ಸಹೋದರಿ ಬಂಗಾರಮ್ಮ, ಲೋಕೇಶ್ ನಿರ್ಮಾಪಕ ವೀರಾಸ್ವಾಮಿ, ನಿರ್ದೇಶಕ ಸಿದ್ದಲಿಂಗಯ್ಯ ಇದ್ದಾರೆ. ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ವಯ್ಯಾರಿ’ ಕಥಾಸಂಕಲನದಲ್ಲಿನ ಸಣ್ಣಕತೆಯನ್ನು ಆಧರಿಸಿ ತಯಾರಾದ ಪ್ರಯೋಗ. ಕನ್ನಡದ ಮಹತ್ವದ ಸಿನಿಮಾಗಳಲ್ಲೊಂದು. ಚಿ.ಉದಯಶಂಕರ್‌, ಆರ್‌.ಎನ್‌.ಜಯಗೋಪಾಲ್‌, ವಿಜಯ ನಾರಸಿಂಹ ರಚನೆಯ ಚಿತ್ರದ ಗೀತೆಗಳಿಗೆ ಜಿ.ಕೆ.ವೆಂಕಟೇಶ್‌ ಸಂಗೀತ ಸಂಯೋಜಿಸಿದ್ದಾರೆ. ಇಂದು ನಟ ಲೋಕೇಶ್ (19/05/1947 – 14/10/2004) ಅವರ ಸಂಸ್ಮರಣಾ ದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post