ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಶಂಕರ್ – ವಿಜಯ್

ಬೆಂಗಳೂರು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ‘ಆಟೋ ರಾಜ’ (1980) ಸಿನಿಮಾ ಚಿತ್ರೀಕರಣದ ಸಂದರ್ಭ. ಶೂಟಿಂಗ್ ಬಿಡುವಿನ ವೇಳೆ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರ ಕ್ಯಾಮೆರಾ ಕಣ್ಣಿಗೆ ನಟ ಶಂಕರ್ ನಾಗ್ ಮತ್ತು ಚಿತ್ರದ ನಿರ್ದೇಶಕ ವಿಜಯ್ ಅವರು ಸೆರೆಯಾಗಿದ್ದು ಹೀಗೆ. ಸಿ.ಜಯರಾಂ ನಿರ್ಮಾಣದ ಈ ಚಿತ್ರಕ್ಕೆ ಎಂ.ಡಿ.ಸುಂದರ್ ಚಿತ್ರಕಥೆ, ರಾಜನ್ – ನಾಗೇಂದ್ರ ಸಂಗೀತ ಸಂಯೋಜನೆ, ಶ್ರೀಕಾಂತ್ ಛಾಯಾಗ್ರಹಣ, ಭಕ್ತವತ್ಸಲಂ ಸಂಕಲವಿದೆ. ಈ ಯಶಸ್ವೀ ಸಿನಿಮಾ ‘ಟ್ಯಾಕ್ಸಿ ಡ್ರೈವರ್’ ಶೀರ್ಷಿಕೆಯಡಿ ತೆಲುಗು ಮತ್ತು ತಮಿಳಿಗೆ ರೀಮೇಕಾಗಿದೆ.

Share this post