ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

‘ಕ್ಯಾಲೆಂಡರ್’ ಟ್ರೇಲರ್ ಬಿಡುಗಡೆ | ಏಪ್ರಿಲ್‌ 3ರಂದು ಸಿನಿಮಾ ತೆರೆಗೆ

ಪೋಸ್ಟ್ ಶೇರ್ ಮಾಡಿ
'ಕ್ಯಾಲೆಂಡರ್' ಟ್ರೇಲರ್ ಬಿಡುಗಡೆ | ಏಪ್ರಿಲ್‌ 3ರಂದು ಸಿನಿಮಾ ತೆರೆಗೆ

ಆದರ್ಶ ಗುಂಡುರಾಜ್‌ ನಿರ್ಮಿಸಿ, ನಟಿಸಿರುವ ‘ಕ್ಯಾಲೆಂಡರ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಲಿದೆ. ನವೀನ್‌ ಶಕ್ತಿ ನಿರ್ದೇಶನದ ಸಿನಿಮಾ ಇದೇ ಏಪ್ರಿಲ್‌ 3ರಂದು ಥಿಯೇಟರ್‌ಗೆ ಬರುತ್ತಿದೆ.

ಈ ಹಿಂದೆ ‘ಸ್ವಾರ್ಥ ರತ್ನ’ ಸೇರಿದಂತೆ ಎರಡು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಆದರ್ಶ ಗುಂಡುರಾಜ್ ಅಭಿನಯದ ‘ಕ್ಯಾಲೆಂಡರ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಏಪ್ರಿಲ್ 3ರಂದು ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಚಿತ್ರದ ನಾಯಕನಟ ಮತ್ತು ನಿರ್ಮಾಪಕ ಆದರ್ಶ್‌ ಗುಂಡೂರಾಜ್‌ ಮಾತನಾಡಿ, ‘ಇದೊಂದು ಮಹಿಳಾ ಪ್ರಧಾನ ಚಿತ್ರ. ಕುಟುಂಬ ಸಮೇತ ನೋಡಲೇ ಬೇಕಾದ ಚಿತ್ರವೂ ಹೌದು. ನನ್ನದು ಈ ಚಿತ್ರದಲ್ಲಿ ವೈದ್ಯನ ಪಾತ್ರ. ಬಹುತಾರಾಗಣದ ಈ ಚಿತ್ರದಲ್ಲಿ ನಿವಿಷ್ಕ ಪಾಟೀಲ್ ಹಾಗೂ ಸುಶ್ಮಿತ ನಾಯಕಿಯರಾಗಿ ನಟಿಸಿದ್ದಾರೆ. ಕನಸಿನ ರಾಣಿ ಮಾಲಾಶ್ರೀ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ’ ಎಂದರು.

ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಸುಚೇಂದ್ರ ಪ್ರಸಾದ್, ಚಂದ್ರಪ್ರಭ ಚಿತ್ರದ ಇತರೆ ಪ್ರಮುಖ ಕಲಾವಿದರು. ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ. ರಮೇಶ್ ಕೊಯಿರಾ ಛಾಯಾಗ್ರಹಣ, ಕೆ.ಜಿ.ಎಫ್ ಖ್ಯಾತಿಯ ವಿಕ್ರಂ ಮೋರ್ ಸಾಹಸ ನಿರ್ದೇಶನ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ಸುರೇಶ್ ಆರ್ಮುಗಂ ಸಂಕಲನ ಹಾಗೂ ಮಹಾಂತೇಶ್ ಆರ್ ಅವರ ಸಹ ನಿರ್ದೇಶನ ಚಿತ್ರಕ್ಕಿದೆ. ನವೀನ್‌ ಶಕ್ತಿ ಚಿತ್ರದ ನಿರ್ದೇಶಕರು. ಇದೇ ಏಪ್ರಿಲ್ 3ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ವಿ.ಕೆ.ಫಿಲಂಸ್ ವಿತರಣೆ ಮಾಡುತ್ತಿದೆ. ಹಿಂದಿ ಭಾಷೆಯಲ್ಲೂ ಸಿನಿಮಾ ತೆರೆಕಾಣುತ್ತಿರುವುದು ವಿಶೇಷ. ನಿರ್ದೇಶಕ ನವೀನ್‌ ಶಕ್ತಿ ಮಾತನಾಡಿ, ‘ನಾನು ಮೂಲತಃ ರಂಗಭೂಮಿಯವವನು. 5000ಕ್ಕೂ ಹೆಚ್ಚು ಬೀದಿ ನಾಟಕ ಪ್ರದರ್ಶನಗಳನ್ನು ಕೊಟ್ಟಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಪ್ರಯತ್ನ. ಇದು ಎಲ್ಲರ ಮನಸ್ಸಿಗೂ ಹತ್ತಿರವಾಗುವ ಚಿತ್ರವಾಗಲಿದೆ.‌ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದರು. ನಾಯಕಿಯರಾದ ಸುಶ್ಮಿತ ಹಾಗೂ ಸಹ ನಿರ್ಮಾಪಕ ಮತ್ತು ನಟ ಶಿವಪ್ರದೀಪ್ ಚಿತ್ರದ ಬಗ್ಗೆ ಮಾತನಾಡಿದರು.

ಈ ಬರಹಗಳನ್ನೂ ಓದಿ