ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

‘ಮಹಾ ಕಾಳಿಪುತ್ರ’ ಶೀರ್ಷಿಕೆ ಬಿಡುಗಡೆ | ರೈತನಿಂದ ಸೈನಿಕನವರೆಗೆ ಸಾಗುವ ಕತೆ

ಪೋಸ್ಟ್ ಶೇರ್ ಮಾಡಿ
'ಮಹಾ ಕಾಳಿಪುತ್ರ' ಶೀರ್ಷಿಕೆ ಬಿಡುಗಡೆ | ರೈತನಿಂದ ಸೈನಿಕನವರೆಗೆ ಸಾಗುವ ಕತೆ

ರೈತ ಮತ್ತು ಸೈನಿಕನ ಕುರಿತ ಕಥಾಹಂದರವಿರುವ ‘ಮಹಾ ಕಾಳಿಪುತ್ರ’ ಸಿನಿಮಾ ಸೆಟ್ಟೇರಿದೆ. ಗಿರೀಶ್‌ ನಿರ್ಮಾಣ, ನಿರ್ದೇಶನದ ಚಿತ್ರವಿದು.

ತಿರುಪತಿ ತಿರುಮಲ ಪ್ರೊಡಕ್ಷನ್ಸ್ ಮೂಲಕ ಗಿರೀಶ್ ಎಸ್.ಎಂ. ಅವರು ನಿರ್ಮಿಸುತ್ತಿರುವ ನೂತನ ಚಿತ್ರ ‘ಮಹಾಕಾಳಿ ಪುತ್ರ’. ಗಿರೀಶ್ ಅವರೇ ನಿರ್ದೇಶಿಸುತ್ತಿರುವ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು‌. ಗಿರೀಶ್ ಗೌಡ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನದಲ್ಲಿ ಸಹಕಾರ ನೀಡುತ್ತಿದ್ದಾರೆ. ಈ ಚಿತ್ರದ ನಾಯಕ, ನಿರ್ಮಾಪಕ, ನಿರ್ದೇಶಕ ಗಿರೀಶ್ ಎಸ್.ಎಂ. ಮಾತನಾಡಿ, ‘ಮೂಲತಃ ನಾನೊಬ್ಬ ರೈತ. ಆ ರೈತನ ಬಗ್ಗೆ ಸಿನಿಮಾ ಮಾಡಲು ಬಂದಿದ್ದೇನೆ. ಇದು ನನ್ನ ಮೊದಲ ಚಿತ್ರ. ಟೈಟಲ್ ಬಗ್ಗೆ ಹೇಳಬೇಕೆಂದರೆ, ಮಹಾಕಾಳಿಪುತ್ರ ಎಂದರೆ ದೈವರ ಆರಾಧಕ, ರೈತರು ಪ್ರತಿದಿನ ದೇವಿಯ ಪೂಜೆ ಮಾಡಿಕೊಂಡೇ ತಮ್ಮ ಕಾಯಕಕ್ಕೆ ಹೊರಡುತ್ತಿದ್ದರು. ಆ ರೈತನನ್ನು ದೇವಿ ಪುತ್ರ ಅಂತ ಚಿತ್ರದಲ್ಲಿ ತೋರಿಸ್ತಿದ್ದೇವೆ. ರೈತರ ಬಗ್ಗೆ ಒಂದೊಳ್ಳೆ ಮೆಸೇಜ್ ಇಟ್ಕೊಂಡು ಈ ಸಿನಿಮಾ ಮಾಡ್ತಿದ್ದೇವೆಮಣ್ಣನ್ನು ನಂಬಿ ದುಡಿಯುವ ರೈತನಿಂದ ಹಿಡಿದು ದೇಶ ಕಾಯೋ ಸೈನಿಕನಿಗೆ ಲಿಂಕ್ ಕೊಟ್ಟು ಈ ಕಾನ್ಸೆಪ್ಟ್ ಮಾಡಿದ್ದೇವೆ’ ಎಂದರು.

ಇದೇ ತಿಂಗಳ 15ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ಪರಭಾಷಾ ಕಲಾವಿದರೂ ನಟಿಸುತ್ತಿದ್ದಾರೆ. ಚಿತ್ರಕಥೆ ಬರೆದಿರುವ ಗಿರೀಶ್ ಗೌಡ ಮಾತನಾಡಿ, ‘ಗಿರೀಶ್ ನನ್ನ ಬಳಿ ಅಸಿಸ್ಟೆಂಟ್ ಆಗಿ ಕೆಲಸ ಮಾಡ್ತಿದ್ದ, ನಾನೀಗ ಮದ್ದೂರ್ ವಡೆ ಸಿನಿಮಾ ಮಾಡ್ತಿದ್ದೇನೆ. ಇದು ನಮ್ಮ ಮಣ್ಣಿನ ಕಥೆ. ಇದೇ ಮಣ್ಣು ಹೇಗೆ ಆರ್ಮಿಗೆ ಸೇರುತ್ತೆ, ನಮ್ಮ ಮಣ್ಣಿಂದ ಗನ್ ಪೌಡರ್ ಕೂಡ ಮಾಡಬಹುದು. ಅದರ ಮೈನಿಂಗ್ ನ ಸಣ್ಣ ಬೇಸ್ ಇಟ್ಕೊಂಡು ಈ ಸಿನಿಮಾ ಮಾಡ್ತಿರೋದು. ನಮ್ಮ‌ಮಣ್ಣಿನ ಬೆಲೆ ಏನು ಅಂತ ತೋರಿಸ್ತಿದ್ದೇವೆ. ಚಿತ್ರದ ನಾಯಕಿಯನ್ನು ಶೀಘ್ರದಲ್ಲೇ ಪರಿಚಯಿಸುತ್ತೇವೆ. ದಸರಾ ವೇಳೆಗೆ ತೆರೆಗೆ ಬರಬೇಕೆಂಬ ಪ್ಲಾನಿದೆ. ಶಿವಮೊಗ್ಗದಲ್ಲಿ ನಡೆಯುವ ಜಾತ್ರೆಯನ್ನು ರಿಯಲ್ ಆಗಿ ಶೂಟ್ ಮಾಡ್ತಿದ್ದೇವೆ. ಮಂಡ್ಯ,ಮದ್ದೂರು ಸುತ್ತಮುತ್ತ ನಡೆಯೋ ಕಥೆಯಿದು‌. ಚಿತ್ರದಲ್ಲಿ ಒಂದೇ ಹಾಡಿದೆ. ರಾಹುಲ್ ವಸ್ತಾರ ಮ್ಯೂಸಿಕ್ ಮಾಡ್ತಿದ್ದಾರೆ. ಚೆನ್ನೈನಲ್ಲಿ ಬಿಜಿಎಂ ಮಾಡಿಸ್ತಿದ್ದೇವೆ. ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್ ಮಾಡ್ತಿದ್ದಾರೆ. ರವಿವರ್ಮ ಬಳಿ ಕೆಲಸ ಮಾಡ್ತಿದ್ದ ವಿಷ್ಣು ಅವರು ಆ್ಯಕ್ಷನ್ ಮಾಡ್ತಿದ್ದಾರೆ. ತಿಥಿ ಥರದ ಕಾನ್ಸೆಪ್ಟ್ ಇದು’ ಎಂದು ಹೇಳಿದರು.

ಈ ಬರಹಗಳನ್ನೂ ಓದಿ