ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಭಾನು ಅಥಯ್ಯ ನೆನಪು

ರಿಚರ್ಡ್‌ ಅಟೆನ್‌ಬರೊ ನಿರ್ದೇಶನದ ‘ಗಾಂಧಿ’ (1982) ಇಂಗ್ಲೀಷ್‌ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಶೀರ್ಷಿಕೆ ಪಾತ್ರಧಾರಿ ಬೆನ್‌ ಕಿಂಗ್‌ಸ್ಲೇ ಅವರೊಂದಿಗೆ ವಸ್ತ್ರವಿನ್ಯಾಸಕಿ ಭಾನು ಅಥಯ್ಯ. ‘ಗಾಂಧಿ’ ಚಿತ್ರದ ಅತ್ಯುತ್ತಮ ವಸ್ತ್ರವಿನ್ಯಾಸಕ್ಕೆ ಆಸ್ಕರ್ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ವ್ಯಕ್ತಿ ಭಾನು ಅಥಯ್ಯ. ಅವರಿ ಜಾನ್ ಮೊಲ್ಲೋರೊಂದಿಗೆ ಈ ಆಸ್ಕರ್ ಪ್ರಶಸ್ತಿ ಹಂಚಿಕೊಂಡಿದ್ದರು. ‘ಲೇಕಿನ್‌’ ಮತ್ತು ‘ಲಗಾನ್‌’ ಹಿಂದಿ ಚಿತ್ರಗಳ ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಅವರು ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಸಿಐಡಿ, ಪ್ಯಾಸಾ, ಕಾಗಜ್‌ ಕೆ ಫೂಲ್‌, ವಕ್ತ್‌, ಆರ್ಝೂ, ಅಮ್ರಪಾಲಿ, ಸೂರಜ್‌, ಅನಿತಾ, ಮಿಲನ್, ರಾತ್ ಔರ್‌ ದಿನ್‌, ಶಿಕಾರ್, ಗೈಡ್, ತೀಸ್ರಿ ಮನ್ಜಿಲ್‌, ಮೇರೆ ಸಾಯಾ, ಇಂತೆಕಾಮ್‌, ಅಭಿನೇತ್ರಿ ಸೇರಿದಂತೆ 100ಕ್ಕೂ ಹೆಚ್ಚು ಹಿಂದಿ ಚಿತ್ರಗಳಿಗೆ ಅವರು ವಸ್ತ್ರವಿನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಂದು ಭಾನು ಅಥಯ್ಯ (28/04/1929 – 15/10/2020) ಅವರ ಸಂಸ್ಮರಣಾ ದಿನ. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು