ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ರಾಜ್ – ಉಡುಪಿ ಜಯರಾಂ

ನಂದಿಬೆಟ್ಟದಲ್ಲಿ ಗೀತಪ್ರಿಯ ನಿರ್ದೇಶನ ‘ಭೂಪತಿ ರಂಗ’ ಸಿನಿಮಾದ ಹಾಡಿನ ಚಿತ್ರೀಕರಣದ ಸಂದರ್ಭ. ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರಿಗೆ ವರನಟ ರಾಜ್ ಮತ್ತು ನೃತ್ಯ ನಿರ್ದೇಶಕ ಉಡುಪಿ ಜಯರಾಂ ಪೋಸು ಕೊಟ್ಟಿದ್ದು ಹೀಗೆ. ಉಡುಪಿ ಜಯರಾಂ ಅವರು ನೃತ್ಯ ನಿರ್ದೇಶನ ಮಾಡಿದ ಮೊದಲ ಕನ್ನಡ ಸಿನಿಮಾ ‘ಭಾಗ್ಯೋದಯ’ (1956). ಕನ್ನಡದ 500ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಕನ್ನಡದ ಜೊತೆ ತಮಿಳು, ತೆಲುಗು, ಹಿಂದಿ, ತುಳು, ಮಲಯಾಳಂ, ಹಿಂದಿ, ಸಿಂಹಳಿ ಭಾಷೆಗಳ ಚಿತ್ರಗಳೂ ಸೇರಿದಂತೆ 650ಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಇಂದು ಉಡುಪಿ ಜಯರಾಂ (28/11/1929 – 13/10/2004) ಅವರ ಸಂಸ್ಮರಣಾ ದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು