ಎಲ್ಲಿಸ್ ಆರ್. ಡಂಗನ್ ನಿರ್ದೇಶನದ ‘ಶಕುಂತಲೆ’ (1940) ತಮಿಳು ಚಿತ್ರದಲ್ಲಿ ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಾದ ಜಿ.ಎನ್.ಬಾಲಸುಬ್ರಹ್ಮಣ್ಯಂ ಮತ್ತು ಎಂ.ಎಸ್.ಸುಬ್ಬಲಕ್ಷ್ಮಿ. ‘ಸೇವಾಸದನಂ’ (1938) ತಮಿಳು ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಸುಬ್ಬಲಕ್ಷ್ಮಿಯವರು ಐದು ತಮಿಳು ಹಾಗೂ ಒಂದು ಹಿಂದಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. 1945ರಲ್ಲಿ ತೆರೆಗೆ ಬಂದ ‘ಮೀರಾ’ ಚಿತ್ರದಲ್ಲಿನ ಮೀರಾಬಾಯಿ ಪಾತ್ರ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಇದೇ ಸಿನಿಮಾ 1947ರಲ್ಲಿ ‘ಮೀರಾಬಾಯಿ’ ಶೀರ್ಷಿಕೆಯಡಿ ಹಿಂದಿಯಲ್ಲಿ ತಯಾರಾಯ್ತು. ಇಂದು ಎಂಎಸ್‌ಎಸ್ (16/09/1916 – 11/12/2004) ಜನ್ಮದಿನ. (Photo Courtesy: frontline)

ಶಕುಂತಲೆ – ಎಂಎಸ್ಎಸ್
- ತಮಿಳು ಸಿನಿಮಾ
Share this post