ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸದಾರಮೆ

ಗುಬ್ಬಿ ವೀರಣ್ಣ ಮತ್ತು ಷಣ್ಮುಖ ಚೆಟ್ಟಿಯಾರ್‌ ನಿರ್ಮಾಣ, ರಾಜಾ ಚಂದ್ರಶೇಖರ್ ನಿರ್ದೇಶನದ ‘ಸದಾರಮೆ’ (1935) ಚಿತ್ರದಲ್ಲಿ ಕೆ.ಅಶ್ವತ್ಥಮ್ಮ (ಸದಾರಮೆ) ಮತ್ತು ಮುರಾರಾಚಾರ್ (ಜಯವೀರ). ಗುಬ್ಬಿ ಕಂಪನಿಯ ಜನಪ್ರಿಯ ನಾಟಕವಿದು. ರಂಗದ ಮೇಲೆ ‘ಕಳ್ಳ’ನ ಪಾತ್ರದಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ಗುಬ್ಬಿ ವೀರಣ್ಣನವರು ಸಿನಿಮಾದಲ್ಲೂ ಇದೇ ಪಾತ್ರ ನಿರ್ವಹಿಸಿದ್ದಾರೆ. ಬಿ.ಜಯಮ್ಮನವರದ್ದು ‘ಚೆಂಚುಕುಮಾರಿ’ ಪಾತ್ರ. ಬೆಳ್ಳಾವೆ ನರಹರಿಶಾಸ್ತ್ರಿ ರಚನೆಯ ಗೀತೆಗಳಿಗೆ ವೆಂಕಟರಾಮಯ್ಯ ಸಂಗೀತ ಸಂಯೋಜಿಸಿದ್ದಾರೆ. ಮುಂಬಯಿಯ ಸೆಂಟ್ರಲ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆದಿತ್ತು. ವಾದ್ಯಗೋಷ್ಠಿಯವರು ಟ್ರ್ಯಾಲಿಯ ಮೇಲೆ ಕುಳಿತು ವಾದ್ಯ ನುಡಿಸುತ್ತಿದ್ದಂತೆ ಹಾಡುಗಳ ಚಿತ್ರೀಕರಣ, ಧ್ವನಿಮುದ್ರಣ ನಡೆಯುವ ಪದ್ಧತಿಯಲ್ಲಿ ಸದಾರಮೆ ಚಿತ್ರೀಕರಣಗೊಂಡಿತು ಎನ್ನುವುದು ವಿಶೇಷ. (ಮಾಹಿತಿ ಕೃಪೆ: ಚಲನಚಿತ್ರ ಇತಿಹಾಸ ಪುಸ್ತಕ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು