ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಹೊಸ ಅಲೆಯ ಸಿನಿಮಾಗಳ ಪ್ರಮುಖ ನಿರ್ದೇಶಕ ಮೃಣಾಲ್ ಸೇನ್

ಪೋಸ್ಟ್ ಶೇರ್ ಮಾಡಿ

ಭಾರತದ ಹೊಸ ಅಲೆಯ ಸಿನಿಮಾಗಳ ಸಂದರ್ಭದಲ್ಲಿ ಸತ್ಯಜಿತ್ ರೇ, ಋತ್ವಿಕ್ ಘಟಕ್‌ ಅವರೊಂದಿಗೆ ಗುರುತಿಸಬಹುದಾದ ಮತ್ತೊಬ್ಬ ಪ್ರಮುಖ ಬೆಂಗಾಲಿ ನಿರ್ದೇಶಕ ಮೃಣಾಲ್‌ ಸೇನ್‌. ಇಂದು (ಮೇ 14) ಅವರ ಜನ್ಮದಿನ.

ಉತ್ತಮ್‌ ಕುಮಾರ್ ನಟಿಸಿದ್ದ ‘ರಾತ್ ಭೋರೆ’ (1955) ಮೃಣಾಲ್ ಸೇನ್‌ ನಿರ್ದೇಶನದ ಚೊಚ್ಚಲ ಬೆಂಗಾಲಿ ಸಿನಿಮಾ. ಆಗಿನ್ನೂ ಸ್ಟಾರ್ ಆಗಿರದ ಉತ್ತಮ್ ‌ಕುಮಾರ್‌ ಅಭಿನಯದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿತ್ತು. ನಿರ್ದೇಶನದ ಎರಡನೇ ಸಿನಿಮಾದಲ್ಲಿ (ನೀಲ್‌ ಅಕಶೇರ್‌ ನೀಛೇ) ಪ್ರೇಕ್ಷಕರು ಮೃಣಾಲ್‌ರನ್ನು ಗುರುತಿಸಿದರು. ತಮ್ಮ ನಿರ್ದೇಶನದ ಮೂರನೇ ಸಿನಿಮಾ ‘ಬೈಶೇ ಶ್ರವಣ್’ನಲ್ಲಿ ಅವರಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟಿತು. ನಂತರ ಅವರು ನಿರ್ದೇಶಿಸಿದ ‘ಭುವನ್‌ ಶೋಮ್‌’ ಭಾರತೀಯ ಹೊಸ ಅಲೆಯ ಸಿನಿಮಾಗಳ ಯಾದಿಯಲ್ಲಿ ಅತ್ಯಂತ ಪ್ರಮುಖ ಚಿತ್ರವೆಂದು ಗುರುತಿಸಿಕೊಂಡಿತು. ಬೆಂಗಾಲಿ ನಿರ್ದೇಶಕರಾದ ಸತ್ಯಜಿತ್ ರೇ ಮತ್ತು ಋತ್ವಿಕ್‌ ಘಟಕ್‌ ಅವರ ಜೊತೆ ಮೃಣಾಲ್‌ ಅವರೂ ಭಾರತೀಯ ಹೊಸ ಅಲೆಯ ಪ್ರಮುಖ ನಿರ್ದೇಶಕರಾಗಿ ಗುರುತಿಸಿಕೊಂಡರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೃಣಾಲ್ ಸಿನಿಮಾಗಳು ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸತೊಡಗಿದವು. ಸಮಾಜದ ವಾಸ್ತವಗಳನ್ನು ತೆರೆಯ ಮೇಲೆ ಕಲಾತ್ಮಕವಾಗಿ ಕಟ್ಟಿಕೊಡುವ ನಿರ್ದೇಶಕನೆಂದು ಅವರು ಹೆಸರಾದರು. ಮಾರ್ಕ್ಸ್‌ ಸಿದ್ಧಾಂತವನ್ನು ಪ್ರತಿಪಾದಿಸುವ ಮೃಣಾಲ್‌ ಸೇನ್‌ ತಮ್ಮ ಚಿತ್ರಗಳಲ್ಲೂ ಈ ನಿಲುವುಗಳನ್ನು ದಾಟಿಸಿದರು. ತಮ್ಮ ಬಹುಪಾಲು ಸಿನಿಮಾಗಳಲ್ಲಿ ಮೃಣಾಲ್ ಕೊಲ್ಕೊತ್ತಾವನ್ನು ಒಂದು ಪಾತ್ರ, ಪ್ರೇರಣೆಯಂತೆ ತೋರಿಸಿದರು. ಭಾರತದಲ್ಲಿ ರಾಜಕೀಯ ಸ್ಥಿತ್ಯಂತರಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮೃಣಾಲ್‌ ಸೇನ್ ಸಿನಿಮಾಗಳು ಜನಸಾಮಾನ್ಯರ ಮೇಲೆ ದೊಡ್ಡ ಪರಿಣಾಮ ಉಂಟುಮಾಡಿದ್ದು ಹೌದು. ಅವರ ಹಲವಾರು ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಗೌರವ ಸಿಕ್ಕಿದೆ. ದಾದಾ ಸಾಹೇಬ್‌ ಫಾಲ್ಕೆ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಮೃಣಾಲ್‌ ಸೇನ್‌ ಪಾತ್ರರಾಗಿದ್ದಾರೆ.

ಮೃಣಾಲ್‌ ಸೇನ್ ಕುರಿತ ಸಾಕ್ಷ್ಯಚಿತ್ರ ಇಲ್ಲಿದೆ..

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರಸಾಹಿತಿ ಗೋಪಾಲ ವಾಜಪೇಯಿ

ಕವಿ, ಪತ್ರಕರ್ತ, ನಾಟಕಕಾರ ಗೋಪಾಲ ವಾಜಪೇಯಿ (01/06/1951 – 20/09/2016) ಚಿತ್ರಸಾಹಿತ್ಯಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇಂದು (ಸೆಪ್ಟೆಂಬರ್‌ 20)

ಹಾಸ್ಯನಟ ರತ್ನಾಕರ್ ಚಿತ್ರನಿರ್ದೇಶಕರೂ ಹೌದು

ಕನ್ನಡ ಚಿತ್ರರಂಗ ಕಂಡ ಪ್ರಮುಖ ಹಾಸ್ಯಕಲಾವಿದರಲ್ಲೊಬ್ಬರು ರತ್ನಾಕರ್. ಅವರು ಜನಿಸಿದ್ದು ಕೊಲ್ಲೂರಿನಲ್ಲಿ. ಓದಿದ್ದು ನಾಲ್ಕನೇ ತರಗತಿಯಷ್ಟೆ. ಕಾರಣಾಂತರಗಳಿಂದ ಚಿಕ್ಕಂದಿನಲ್ಲೇ ಅವರು

ಕಂಚಿನಕಂಠದ ನಟ ಅರಸ್

ಕನ್ನಡ ಚಿತ್ರರಂಗದ ಕಂಚಿನಕಂಠದ ನಟ ಸುಂದರ ಕೃಷ್ಣ ಅರಸ್. ಚಾಮರಾಜನಗರ ಸಮೀಪದ ಉತ್ತವಳ್ಳಿ ಹುಟ್ಟೂರು. ಯಳಂದೂರಿನಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದ