ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಪೋಸ್ಟ್ ಶೇರ್ ಮಾಡಿ

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ ರಂಗಭೂಮಿಯೆಡೆ ಆಕರ್ಷಿತರಾದರು. ಮನೆಯಲ್ಲಿನ ಆರ್ಥಿಕ ಅನಾನುಕೂಲತೆಯಿಂದಾಗಿ ಓದು ಮೊಟಕುಗೊಂಡಿತು. ಬಷೀರ್‌ ನಾಟಕ ಕಂಪನಿಯ ವಿವಿಧ ನಾಟಕಗಳ ಪ್ರಮುಖ ಪಾತ್ರಗಳಲ್ಲಿ ನಟಿಸಿದ ನಂತರ ಸಿನಿಮಾ ಹೀರೋ ಆಗುವ ಕನಸು ಕಂಡರು. ಅದೃಷ್ಟವೂ ಅವರಿಗೆ ಜೊತೆಯಾಯ್ತು. ‘ವೀರಸಂಕಲ್ಪ’ (1964) ಚಿತ್ರದ ನಾಯಕನಾದರು.

ನಂತರ ಚಕ್ರತೀರ್ಥ, ಪಾತಾಳ ಮೋಹಿನಿ, ಜ್ವಾಲಾಮೋಹಿನಿ, ಮದುವೆ ಮದುವೆ ಮದುವೆ, ರಾಜಶೇಖರ ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದ ವೆಂಕಟೇಶ್‌ ಮುಂದೆ ಪೋಷಕ ಪಾತ್ರಗಳತ್ತ ಹೊರಳಿದರು. ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಚಿತ್ರನಿರ್ಮಾಣದತ್ತ ಹೊರಳಿದರು. ಮಲ್ಲಿಗೆ ಸಂಪಿಗೆ, ಗಣೇಶ ಮಹಿಮೆ, ಗಂಡುಗಲಿ ರಾಮ, ತಪ್ಪಿದ ತಾಳ ಅವರ ನಿರ್ಮಾಣದ ಸಿನಿಮಾಗಳು. ಸಹನಿರ್ಮಾಪಕರಾಗಿಯೂ ಅವರು ಚಿತ್ರನಿರ್ಮಾಣದಲ್ಲಿ ಹಣ ಹೂಡಿಕೆ ಮಾಡಿದ್ದರು. ಇತರೆ ನಿರ್ಮಾಪಕರಿಗೆ ಹಣಕಾಸಿನ ನೆರವು ನೀಡಿದ್ದಲ್ಲದೆ ಚಿತ್ರೋಧ್ಯಮದ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು.

ಬಿ.ಎಂ.ವೆಂಕಟೇಶ್‌ | ಜನನ: 17/04/1935 | ನಿಧನ: 17/05/2011

(ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರರಂಗಕ್ಕೆ ಆಸರೆಯಾದ ಅರಸು

ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ  `ಜೀವನ

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ.