ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ `ಜೀವನ ನಾಟಕ’ (1942) ಚಿತ್ರದೊಂದಿಗೆ ಕೆಂಪರಾಜ ಅರಸು ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. `ಭಕ್ತ ರಾಮದಾಸ್’ (1948) ಚಿತ್ರದೊಂದಿಗೆ ನಿರ್ದೇಶಕರಾದ ಅವರಿಗೆ `ರಾಜಾವಿಕ್ರಮ’ (1951) ಚಿತ್ರದ ಪಾತ್ರ ಹೆಸರು ತಂದುಕೊಟ್ಟಿತು. ಇದು ಅವರ ನಿರ್ಮಾಣ ಸಂಸ್ಥೆಯಡಿ ತಯಾರಾದ ಚಿತ್ರವೂ ಹೌದು.
ಮುಂದೆ `ಜಲದುರ್ಗ’, `ನಳ ದಮಯಂತಿ’ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ನಟಿಸಿದರು. `ಜಲದುರ್ಗ’, ಫ್ರೆಂಚ್ ಕಾದಂಬರಿ `ಕೌಂಟ್ ಆಫ್ ಮಾಂಟ್‍ಕ್ರಸ್ಟೋ’ ಆಧರಿಸಿದ ಸಿನಿಮಾ. `ಕೃಷ್ಣಲೀಲಾ’, `ಮಹಾನಂದ’ ಅರಸರ ಇತರ ಪ್ರಮುಖ ಚಿತ್ರಗಳು. ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಉತ್ತಮ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.
ಕೆಂಪರಾಜ ಅರಸ್ | ಜನನ: 05/02/1917 | ನಿಧನ: 18/05/1982)
