ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಟಿ ದುರ್ಗಾ ಕೋಟೆ ನೆನಪು

ವಿ.ಶಾಂತಾರಾಂ ನಿರ್ದೇಶನದ ‘ಅಮರಜ್ಯೋತಿ’ (1936) ಹಿಂದಿ ಚಿತ್ರದ ಪ್ರಮುಖ ಪಾತ್ರ ‘ಸೌದಾಮಿನಿ’ಯಾಗಿ ನಟಿ ದುರ್ಗಾ ಕೋಟೆ. ‘ಇಂಡಿಯಾ ಟುಡೆ’ 2000ರಲ್ಲಿ ವಿಶೇಷ ಸಂಚಿಕೆಯ ‘100 people who shaped India’ ಪಟ್ಟಿಯಲ್ಲಿ ನಟಿ ದುರ್ಗಾ ಕೋಟೆ ಅವರ ಹೆಸರೂ ಇತ್ತು. ಹಿಂದಿ ಮತ್ತು ಮರಾಠಿ ಸಿನಿಮಾ – ರಂಗಭೂಮಿ ನಟಿ ದುರ್ಗಾ ಕೋಟೆ ಐದು ದಶಕಗಳ ವೃತ್ತಿ ಬದುಕಿನಲ್ಲಿ ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮೊಘಲ್‌ ಎ ಅಜಾಮ್‌, ಭರತ್ ಮಿಲಾಪ್‌, ಚರಣೋ ಕಿ ದಾಸಿ, ಮಿರ್ಜಾ ಗಾಲಿಬ್‌, ಬಾಬ್ಬಿ, ಬಿದಾಯಿ… ಅವರ ಕೆಲವು ಪ್ರಮುಖ ಸಿನಿಮಾಗಳು. ಸಿನಿಮಾರಂಗದ ಅತ್ಯುನ್ನತ ಪುರಸ್ಕಾರ ದಾದಾ ಸಾಹೇಬ್ ಫಾಲ್ಕೆ ಗೌರವ ಅವರಿಗೆ ಸಂದಿದೆ. ಇಂದು ದುರ್ಗಾ ಕೋಟೆ (14/01/1905 – 22/09/1991) ಅವರ ಸಂಸ್ಮರಣಾ ದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು