ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಅಮೃತ ಘಳಿಗೆ

‘ಅಮೃತ ಘಳಿಗೆ’ (1984) ಸಿನಿಮಾ ಚಿತ್ರೀಕರಣ ಸಂದರ್ಭ. ಚಿತ್ರದ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರು ನಟರಾದ ಶ್ರೀಧರ್ ಮತ್ತು ರಾಮಕೃಷ್ಣ ಅವರಿಗೆ ಸನ್ನಿವೇಶದ ವಿವರಣೆ ನೀಡುತ್ತಿದ್ದಾರೆ. ಚಿತ್ರದ ಛಾಯಾಗ್ರಾಹಕ ಬಿ.ಎಸ್‌.ಬಸವರಾಜು (ಎಡತುದಿ) ಫೋಟೋದಲ್ಲಿದ್ದಾರೆ. ದೊಡ್ಡೇರಿ ವೆಂಕಟಗಿರಿರಾವ್‌ ಅವರ ‘ಅವದಾನ’ ಕಾದಂಬರಿ ಆಧರಿಸಿ ತಯಾರಾದ ಚಿತ್ರವಿದು. ವಿಜಯನಾರಸಿಂಹ ರಚನೆಯ ಗೀತೆಗಳಿಗೆ ವಿಜಯಭಾಸ್ಕರ್ ಸಂಗೀತ ಸಂಯೋಜಿಸಿದ್ದಾರೆ. ಅತ್ಯುತ್ತಮ ಚಿತ್ರಕಥೆ (ಪುಟ್ಟಣ್ಣ ಕಣಗಾಲ್‌), ಅತ್ಯುತ್ತಮ ಛಾಯಾಗ್ರಹಣ (ಬಿ.ಎಸ್‌.ಬಸವರಾಜು) ಮತ್ತು ಅತ್ಯುತ್ತಮ ಸಂಕಲನಕ್ಕಾಗಿ (ವಿ.ಪಿ.ಕೃಷ್ಣ) ರಾಜ್ಯಪ್ರಶಸ್ತಿ ಸಂದಿವೆ. (ಈ ಚಿತ್ರಕ್ಕೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೊ ಇದು.)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು