ತಮಿಳು ಸಿನಿಮಾರಂಗದ ಯಶಸ್ವೀ ನಾಯಕನಟರಲ್ಲೊಬ್ಬರು ವಿಜಯಕಾಂತ್. ಪ್ರಸ್ತುತ ಸಕ್ರಿಯ ರಾಜಕಾರಣಿ. ‘ಪುರಚ್ಚಿ ಕಲೈನಾರ್’ (ಕ್ರಾಂತಿಕಾರಿ ಹೀರೋ) ಎಂದೇ ಕರೆಸಿಕೊಂಡಿದ್ದ 80ರ ದಶಕದ ಜನಪ್ರಿಯ ಹೀರೋ. ಚಿತ್ರನಿರ್ಮಾಪಕ, ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದ ವಿಜಯಕಾಂತ್ 150ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಂದು (ಅಗಸ್ಟ್ 25) ಅವರಿಗೆ 69 ವರ್ಷ ತುಂಬಿತು.

ವಿಜಯಕಾಂತ್ – 69
- ತಮಿಳು ಸಿನಿಮಾ
Share this post