ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಗಾಯಕಿ ರತ್ನಮಾಲಾ ಪ್ರಕಾಶ್

ಕಾರ್ಯಕ್ರಮವೊಂದರಲ್ಲಿ ಗಾಯಕಿಯರಾದ ರತ್ನಮಾಲಾ ಪ್ರಕಾಶ್ ಮತ್ತು ಮಾಲತಿ ಶರ್ಮಾ. ಕನ್ನಡ ಸುಗಮಸಂಗೀತ ಮತ್ತು ಸಿನಿಮಾ ಹಿನ್ನೆಲೆಗಾಯನ ಕ್ಷೇತ್ರದ ಪ್ರಮುಖ ಗಾಯಕಿ ರತ್ನಮಾಲಾ ಪ್ರಕಾಶ್‌. ಖ್ಯಾತ ಕರ್ನಾಟಕ ಶಾಸ್ತ್ರೀಯ ಗಾಯಕ ಆರ್‌.ಕೆ.ಶ್ರೀಕಂಠನ್ ಅವರ ಪುತ್ರಿ. ಕನ್ನಡ ಸುಗಮಸಂಗೀತ ಮತ್ತು ಸಿನಿಮಾರಂಗದ ಜನಪ್ರಿಯ ಸಂಗೀತ ಸಂಯೋಜಕರ ಸಂಯೋಜನೆಯ ಅಸಂಖ್ಯಾತ ಹಾಡುಗಳಿಗೆ ದನಿಯಾಗಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ರತ್ನಮಾಲಾ ಅವರಿಗೆ ಹಲವು ಗೌರವಗಳು ಸಂದಿವೆ. ಇಂದು ರತ್ನಮಾಲಾ ಪ್ರಕಾಶ್‌ ಅವರ 66ನೇ ಹುಟ್ಟುಹಬ್ಬ. (Photo Courtesy: Rathnamala Prakash FB page)

Share this post