ಅರವಿಂದ ಕೌಶಿಕ್ ನಿರ್ದೇಶನದ ನೂತನ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ. ಚಿತ್ರದ ಶೀರ್ಷಿಕೆ ‘ಕಂಟ್ರಿ ಮೇಡ್ ಭಾಗ 2’. ನಟ, ನಿರ್ದೇಶಕ ಉಪೇಂದ್ರ ಶೀರ್ಷಿಕೆ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು.
ಅರವಿಂದ ಕೌಶಿಕ್ ನಿರ್ದೇಶನದ ನೂತನ ಸಿನಿಮಾಗೆ ‘ಕಂಟ್ರಿ ಮೇಸ್ ಭಾಗ 2’ ಎನ್ನುವ ಶೀರ್ಷಿಕೆ ನಿಗದಿಯಾಗಿದೆ. ನಟ, ನಿರ್ದೇಶಕ ಉಪೇಂದ್ರ ಅವರು ಇಂದು ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ‘ಇದೊಂದು ದೈವ – ದೈತ್ಯರ ಒಪ್ಪಂದಗಳ ಕಥೆ’ ಎನ್ನುತ್ತಲೇ ಕುತೂಹಲ ಮೂಡಿಸಿದ್ದಾರೆ ಕೌಶಿಕ್. ಮನುಷ್ಯ ಮನಸ್ಸುಗಳಲ್ಲಿನ ರಾಕ್ಷಸ ಪ್ರವೃತ್ತಿಯನ್ನ ಪರೀಕ್ಷಿಸುತ್ತಾ …ಪೆಂಡಾಲ್ಪುರ ಎನ್ನುವ ಊರನ್ನ ಕಟ್ಟಿ ಅಲ್ಲಿ ಒಂದಿಷ್ಟು ಪಾತ್ರಗಳನ್ನು ಸೃಷ್ಟಿಸಿ …ಒಂದು ತಲ್ಲಣದ ,ಹಿಂಸೆಯ , ಭಾವನೆಗಳ ಚಿತ್ರಣವನ್ನು ಕಂಟ್ರಿ ಮೇಡ್ ಮುಖೇನ ತೆರೆಗೆ ತರುತ್ತಿದ್ದಾರೆ.
‘ಹುಲಿರಾಯ’ ಮತ್ತು ‘ಅರ್ಧಂಬರ್ಧ ಪ್ರೇಮಕಥೆ’ ಚಿತ್ರಗಳ ಛಾಯಾಗ್ರಾಹಕ ಸೂರ್ಯ ರವರ ಕೆಲಸ, ಅರ್ಜುನ್ ರಾಮು ರವರ ಸಂಗೀತ ಸಂಯೋಜನೆ, ಜೊತೆಗೆ ಉಮೇಶ್ ಮಠಪತಿ, ಸೂರ್ಯ ,ಅರವಿಂದ್ ಕೌಶಿಕ್ ಹಾಗೂ ಚಂದನ್ ಗೌಡ ರವರ ನಿರ್ಮಾಣ ಚಿತ್ರಕ್ಕೆ ಇದೆ. ಸತೀಶ್ ಬ್ರಹ್ಮಾವರ ರ ನಿರ್ಮಾಣ ನಿರ್ವಹಣೆ ಚಿತ್ರಕ್ಕೆ ಇದೆ. ಸಂತೋಷ್ ರಾಧಾಕೃಷ್ಣನ್ ರವರು ಚಿತ್ರಕ್ಕೆ ವಿ ಎಫ್ ಎಕ್ಸ್ ಹಾಗು ಪೋಸ್ಟರ್ ಗಳನ್ನ ಸಂಯೋಜಿಸಿದ್ದಾರೆ. ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದಲ್ಲಿ ಅಭಿಲಾಷ್ ದ್ವಾರಕೀಶ್, ರಾಘವ ರಾಮ್, ಪ್ರದೀಪ್ ರೋಷನ್, ಕುಲದೀಪಕ, ಗೌರವ್ ಆರ್ಯನ್ , ಕುಲದೀಪ್, ಸುಜಿತ್ ಶೆಟ್ಟಿ, ಅಶ್ವಿತ ಗೌಡ, ಅಪೂರ್ವ ಶ್ರೀ, ಸುಧಾ ಪ್ರಸನ್ನ,ರೇಣುಕಾ ಮುಂತಾದವರು ನಟಿಸಿದ್ದಾರೆ. ಇನ್ನಷ್ಟು ವಿಷಯಗಳು ಮುಂದಿನ ದಿನಗಳಲ್ಲಿ ತಿಳಿದುಬರಲಿದೆ.







