ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

‘TOXIC’ ಬಿಡುಗಡೆ ಜೂನ್‌ 4ಕ್ಕೆ ಮುಂದೂಡಿಕೆ!

ಪೋಸ್ಟ್ ಶೇರ್ ಮಾಡಿ
'TOXIC' ಬಿಡುಗಡೆ ಜೂನ್‌ 4ಕ್ಕೆ ಮುಂದೂಡಿಕೆ!

ಯಶ್‌ ನಟನೆಯ ‘TOXIC’ ಸಿನಿಮಾ ಇದೇ ತಿಂಗಳು ಮಾರ್ಚ್‌ 19ರಂದು ತೆರೆಕಾಣಬೇಕಿತ್ತು. ಇದೀಗ ಚಿತ್ರದ ಬಿಡುಗಡೆ ಜೂನ್‌ 4ಕ್ಕೆ ಮುಂದೂಡಲ್ಪಟ್ಟಿದೆ.

KVN ಪ್ರೊಡಕ್ಷನ್ಸ್ ಮತ್ತು ಮಾನ್ಸ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ನಿರ್ಮಾಣದ ‘TOXIC’ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದೆ. ಪೂರ್ವ ನಿಗದಿಯಂತೆ ಸಿನಿಮಾ 2026 ಮಾರ್ಚ್ 19ರಂದು ವಿಶ್ವವ್ಯಾಪಿ ತೆರೆಕಾಣಬೇಕಿತ್ತು. ಮಧ್ಯ ಪೂರ್ವದಲ್ಲಿ ನಡೆಯುತ್ತಿರುವ ಅಸ್ಥಿರತೆ ಮತ್ತು ಉದ್ವಿಗ್ನ ಪರಿಸ್ಥಿತಿಗಳ ಹಿನ್ನೆಲೆ ಚಿತ್ರದ ಬಿಡುಗಡೆಯನ್ನು 2026 ಜೂನ್ 4ಕ್ಕೆ ಮುಂದೂಡಲಾಗಿದೆ. ಚಿತ್ರದ ಪ್ರಮುಖ ವಿತರಣೆ ಪಾಲುದಾರರಾದ Phars Films ಅವರ ಸಲಹೆಯಂತೆ, ಗಲ್ಪ್ ಪ್ರದೇಶದಲ್ಲಿ ಉಲ್ಬಣವಾಗುತ್ತಿರುವ ಉದ್ವಿಗ್ನತೆ ಮತ್ತು ಅದರ ಪರಿಣಾಮವಾಗಿ ಸಿನಿಮಾ ಪ್ರದರ್ಶನದಲ್ಲಿ ಉಂಟಾಗಿರುವ ವ್ಯತ್ಯಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.

ಮಾರ್ಚ್‌ 8ರಂದು ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಲು ನಿರ್ಧರಿಸಲಾಗಿತ್ತು. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಟ್ರೇಲರ್‌ ಲಾಂಚ್‌ ಇವೆಂಟ್‌ಗೆ ದೇಶದ ವಿವಿಧೆಡೆಯಿಂದ ಪತ್ರಕರ್ತರು ಬರುವವರಿದ್ದರು. ಚಿತ್ರತಂಡದವರು ಚಿತ್ರದ ಅಂತಿಮ ಪ್ರಚಾರ ವೇಳಾಪಟ್ಟಿಯನ್ನು ಕೂಡ ರೂಪಿಸಿಕೊಂಡಿದ್ದರು. ಇದೀಗ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಟ್ರೇಲರ್‌ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಗೀತು ಮೋಹನ್‌ ದಾಸ್‌ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಯನತಾರಾ, ಕೈರಾ ಅಡ್ವಾನಿ, ರುಕ್ಮಿಣಿ ವಸಂತ್‌, ಹ್ಯೂಮಾ ಖುರೇಶಿ, ತಾರಾ ಸುತಾರಿಯಾ ಇದ್ದಾರೆ.

ಈ ಬರಹಗಳನ್ನೂ ಓದಿ