ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಭಕ್ತವತ್ಸಲಂ

ಸಂಕಲನಕಾರ
ಪೋಸ್ಟ್ ಶೇರ್ ಮಾಡಿ

ಆತ್ಮೀಯರಿಂದ ‘ಭಕ್ತ’ ಎಂದೇ ಕರೆಸಿಕೊಳ್ಳುತ್ತಿದ್ದ ಭಕ್ತವತ್ಸಲಂ ಅವರದ್ದು ವ್ಯಾಕರಣಬದ್ಧ ಸಂಕಲನ. ಸಿನಿಮಾದ ಛಾಯಾಗ್ರಹಣ, ನಿರ್ದೇಶನದಲ್ಲಿ ತಪ್ಪುಗಳಾಗಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಅವರು ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು! ಹೀಗಾಗಿ ಅವರಲ್ಲಿ ತಮ್ಮ ಸಿನಿಮಾಗೆ ಸಂಕಲನ ಮಾಡಿಸಲು ಅನನುಭವಿ ನಿರ್ದೇಶಕರು ಹೆದರುತ್ತಿದ್ದರಂತೆ. ಹೀಗೆ, ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ್ ಸರ್ ಅಂದಿನ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ.

ಮದರಾಸು ಮೂಲದವರಾದರೂ ಕನ್ನಡಿಗರೇ ಆಗಿಹೋಗಿದ್ದರು ಭಕ್ತವತ್ಸಲಂ. ಹುಟ್ಟಿದ್ದು ಕಾಂಚೀಪುರಂನಲ್ಲಿ (14/01/1934). ಮದರಾಸಿನ ‘ಸ್ಟಾರ್ ಕಂಬೈನ್ಸ್‌’ ಸ್ಟುಡಿಯೋದಲ್ಲಿ ಸಂಕಲನಕಾರರಾದ ಎಲ್‌.ಎಸ್‌.ರಾಮಚಂದ್ರನ್ ಮತ್ತು ಸೂರ್ಯ ಅವರಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ಭಕ್ತವತ್ಸಲಂ ಸ್ವತಂತ್ರ್ಯವಾಗಿ ಸಂಕಲನ ಮಾಡಿದ ಮೊದಲ ಸಿನಿಮಾ ‘ನಾಗಪೂಜಾ’. ಮುಂದಿನ ದಿನಗಳಲ್ಲಿ ಅವರು ಅತ್ಯಂತ ಬೇಡಿಕೆಯ ಸಂಕಲನಕಾರರಾದರು. ಆಗ ಬಿಡುಗಡೆಯಾಗುತ್ತಿದ್ದ ಬಹುತೇಕ ಕನ್ನಡ ಚಿತ್ರಗಳ ಸಂಕಲನಕಾರ ಭಕ್ತವತ್ಸಲಂ ಅವರೇ ಆಗಿರುತ್ತಿದ್ದರು.

ನಾಲ್ಕು ದಶಕಗಳ ವೃತ್ತಿ ಬದುಕಿನಲ್ಲಿ ಅವರು ಸರಿಸುಮಾರು 230ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಕಲನ ಮಾಡಿದ್ದಾರೆ. ಕನ್ನಡದ ಮಹತ್ವದ ಸಿನಿಮಾಗಳ ಟೈಟಲ್ ಕಾರ್ಡ್‍ಗಳಲ್ಲಿ ಭಕ್ತವತ್ಸಲಂ ಅವರ ಹೆಸರನ್ನು ನೋಡಬಹುದು. ಆಗ ಅತ್ಯಂತ ಕ್ಲಿಷ್ಟಕರ ಪ್ರೊಸೆಸ್ ಎಂದೇ ಕರೆಸಿಕೊಳ್ಳುತ್ತಿದ್ದ ಸಂಕಲನ ವಿಭಾಗದಲ್ಲಿ ಅಪಾರ ಪರಿಣತಿ ಸಾಧಿಸಿದ್ದರವರು. ಕುಲಗೌರವ, ಬಂಗಾರದ ಮನುಷ್ಯ, ಪ್ರೇಮದ ಕಾಣಿಕೆ, ಶಂಕರ್ ಗುರು, ಒಂದಾನೊಂದು ಕಾಲದಲ್ಲಿ”, ಮಿಂಚಿನ ಓಟ, ಹಾಲು ಜೇನು ಸಿನಿಮಾಗಳ ಅತ್ಯತ್ತಮ ಸಂಕಲನಕ್ಕಾಗಿ ಅವರು ಏಳು ಬಾರಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1996ರ ಡಿಸೆಂಬರ್‌ 6ರಂದು ಭಕ್ತವತ್ಸಲಂ ಅಗಲಿದರು.

ಸಂಕಲನ ನಿರತ ಭಕ್ತವತ್ಸಲಂ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ