ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಕಮಿಡಿಯನ್ ಗುಗ್ಗು

ನಟ
ಪೋಸ್ಟ್ ಶೇರ್ ಮಾಡಿ

ಕನ್ನಡ ಸಿನಿಮಾ ರೂಪುಗೊಂಡ ಹಾದಿಯಲ್ಲಿ ಹಲವಾರು ಅಪರೂಪದ ವ್ಯಕ್ತಿತ್ವಗಳು, ಸಂದರ್ಭಗಳು ಕಾಣಸಿಗುತ್ತವೆ. ಈ ಹಾದಿಯಲ್ಲಿನ ಅಂತಹ ವಿಶಿಷ್ಟ ವ್ಯಕ್ತಿ ಕಮೆಡಿಯನ್ ಗುಗ್ಗು. 50-60ರ ದಶಕದ ಸಿನಿಮಾಗಳಲ್ಲಿ ನಟಿಸಿದ ಕನ್ನಡ ಹಾಸ್ಯನಟ. ನಿಜನಾಮಧೇಯ ಅಶ್ವತ್ಥ ನಾರಾಯಣ ಶೆಟ್ಟಿ. ಚಿಕ್ಕಂದಿನಿಂದಲೂ ನಾಟಕದ ಗೀಳು ಹೊಂದಿದ್ದ ಅವರಿಗೆ ನಟನೆಯ ಪ್ರಾಥಮಿಕ ತರಬೇತಿ ಸಿಕ್ಕಿದ್ದು ಹಿರಣ್ಣಯ್ಯ ಮಿತ್ರಮಂಡಳಿಯಲ್ಲಿ.

‘ನಟಶೇಖರ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದರು. ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಗ ಸಿನಿಮಾ ಸೇರಬೇಕೆಂದು ಆಸೆಯಿಂದ ಬರಿಗೈಯಲ್ಲಿ ಮದರಾಸಿಗೆ ಹೋಗುವವರು “ಗುಗ್ಗು ಮಹಲ್’ ನಲ್ಲಿ ಆಶ್ರಯ ಪಡೆಯುತ್ತಿದ್ದರಂತೆ. ಧರ್ಮ, ಜಾತಿ, ಪಂಗಡ ಯಾವುದನ್ನೂ ನೋಡದೆ ಗುಗ್ಗು ತಮ್ಮ ಮನೆಯಲ್ಲಿ ಆಶ್ರಯ ನೀಡುತ್ತಿದ್ದರು. ಮಹಲ್ ಎಂದು ಕರೆಸಿಕೊಂಡಾಕ್ಷಣ ಅದೇನೂ ಬಂಗಲೆಯಾಗಿರಲಿಲ್ಲ, ಪುಟ್ಟ ಮನೆಯಷ್ಟೆ. ಆದರೆ ಗುಗ್ಗು ಅವರ ಮನಸ್ಸು ದೊಡ್ಡದಿತ್ತು. ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿದ್ದ ಈ ನಟ ಮನೆಗೆ ಬಂದವರಿಗೆ ಕೈಲಾದ ನೆರವು ನೀಡುತ್ತಿದ್ದರು. ಆಶ್ರಯ ಪಡೆದವರು ಪ್ರೀತಿಯಿಂದ ಮನೆಯನ್ನು `ಗುಗ್ಗು ಮಹಲ್’ ಎಂದೇ ಕರೆದರು.

ಕಮೆಡಿಯನ್ ಗುಗ್ಗು 220ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಪಟ್ಟಿಯಲ್ಲಿ ಐದಾರು ತಮಿಳು, ತೆಲುಗು ಚಿತ್ರಗಳೂ ಇವೆ. ರಾಣಿಹೊನ್ನಮ್ಮ, ಅಣ್ಣ ತಂಗಿ, ವೀರಕೇಸರಿ, ಬೇವು ಬೆಲ್ಲ, ನಾಗಪೂಜಾ, ಮಹಿರಾವಣ, ಹಸಿರು ತೋರಣ, ಮಾವನ ಮಗಳು, ಬೆಟ್ಟದ ಭೈರವ ಅವರ ಪ್ರಮುಖ ಸಿನಿಮಾಗಳು. ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ನೂರಾರು ಜನರಿಗೆ ನೆರವಾದ ಗುಗ್ಗು (18/03/1918 – 22/06/1984) ನೋವಿನಲ್ಲೂ ಖುಷಿಯಿಂದ ಬಾಳ್ವೆ ನಡೆಸಿದರು.

`ದೂರದ ಬೆಟ್ಟ’ (1973) ಚಿತ್ರದಲ್ಲಿ ದ್ವಾರಕೀಶ್, ಎಂ.ಎಸ್.ಸತ್ಯ, ಕಮೆಡಿಯನ್ ಗುಗ್ಗು, ಬೆಂಗಳೂರು ನಾಗೇಶ್ ಮತ್ತು ಚಿ.ಉದಯಶಂಕರ್

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಅಪ್ರತಿಮ ನಾಟಕಕಾರ ಬಿ.ಪುಟ್ಟಸ್ವಾಮಯ್ಯ

ಪುಟ್ಟಸ್ವಾಮಿಯ್ಯನವರಿಗೂ ನಾಟಕರಂಗಕ್ಕೂ ನಿಕಟ ಬಾಂಧವ್ಯವಿತ್ತು. ಪತ್ರಿಕೋದ್ಯಮದಿಂದ ಬೇಸತ್ತ ಅವರು ನಾಟಕರಂಗಕ್ಕೆ ತಮ್ಮನ್ನು ತೊಡಗಿಸಿಕೊಂಡರು. ನಾಟಕ ಕ್ಷೇತ್ರದಲ್ಲಿ ಅವರು ಬಳಸಿಕೊಂಡ ವಸ್ತು