ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ದೂರದ ಬೆಟ್ಟ ಶೂಟಿಂಗ್

‘ದೂರದ ಬೆಟ್ಟ’ (1973) ಹೊರಾಂಗಣ ಚಿತ್ರೀಕರಣದ ಸಂದರ್ಭ. ಸಹಾಯಕ ನಿರ್ದೇಶಕ ಭಾರ್ಗವ, ನಿರ್ದೇಶಕ ಸಿದ್ದಲಿಂಗಯ್ಯ, ನಟ ಎಂ.ಪಿ.ಶಂಕರ್‌, ಛಾಯಾಗ್ರಾಹಕ ಡಿ.ವಿ.ರಾಜಾರಾಂ ಇದ್ದಾರೆ. ‘ರತ್ನಮಂಜರಿ’ (1962) ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಎಂ.ಪಿ.ಶಂಕರ್‌ ಸತ್ಯಹರಿಶ್ಚಂದ್ರ, ಬೂತಯ್ಯನ ಮಗ ಅಯ್ಯು, ಬಂಗಾರದ ಮನುಷ್ಯ, ಗಂಧದ ಗುಡಿ, ನಾಗರಹಾವು, ಭೂಲೋಕದಲ್ಲಿ ಯಮರಾಜ, ದೂರದ ಬೆಟ್ಟ, ವೀರಸಂಕಲ್ಪ… ಹೀಗೆ ಉತ್ತಮ ಪಾತ್ರಗಳೊಂದಿಗೆ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಕಾಡು ಮತ್ತು ವನ್ಯಜೀವಿಗಳ ಬಗ್ಗೆ ವಿಶೇಷ ಆಸ್ಥೆಯಿದ್ದ ಅವರು ತಮ್ಮ `ಭರಣಿ ಚಿತ್ರ’ ಸಂಸ್ಥೆಯಡಿ ಕೆಲವು ಕಾಡಿನ ಸಿನಿಮಾಗಳನ್ನು ತೆರೆಗೆ ತಂದರು. ಇಂದು ಎಂ.ಪಿ.ಶಂಕರ್‌ (20/08/1935 – 17/07/2008) ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post