
ನನ್ನ ನೆಚ್ಚಿನ ಮೂರು ಸಿನಿಮಾ ಸನ್ನಿವೇಶಗಳು
ಮಠ (2006) : ಯಾವುದೇ ವ್ಯಕ್ತಿ ದುಡಿದು ತಿನ್ನಬೇಕು, ಸೋಮಾರಿಯಾಗಿರಬಾರದು. ಆಗಲೇ ಅವನ ಭವಿಷ್ಯ ಸೊಗಸಾಗಿರುತ್ತೆ ಅನ್ನೋ UNIVERSAL ಸತ್ಯ ‘ಮಠ’ ಚಿತ್ರದ ಒಂದು ಸನ್ನಿವೇಶದಲ್ಲಿ ಬರುತ್ತದೆ. ನಿರ್ದೇಶಕ ಗುರುಪ್ರಸಾದ್ ಈ ಸೀನ್ ಅನ್ನು ಪರಿಣಾಮಕಾರಿಯಾಗಿ ಕಟ್ಟಿದ್ದಾರೆ. ಧರಣಿ ಮಂಡಲ ಮಧ್ಯದೊಳಗೆ (1983) : ಈ ಜಗತ್ತಲ್ಲಿ ಎಷ್ಟೋ ಕ್ರಾಂತಿಗಳಾಗಿವೆ. ನಾವು ಮನುಷ್ಯರೆಲ್ಲಾ ಒಂದೇ ಅನ್ನುತ್ತೇವೆ. ಆದರೆ ಒಬ್ಬ ವ್ಯಕ್ತಿ ತನಗಿಂತ ಕೆಳಮಟ್ಟದಲ್ಲಿದ್ದಾನೆ ಅಂದ ತಕ್ಷಣ, ಅದು ಸಾಮಾಜಿಕವಾಗಲೀ ಆರ್ಥಿಕವಾಗಲೀ ಅಥವಾ ಯಾವುದೇ ಕಂಪನಿಗಳಲ್ಲಿ ವ್ಯಾವಹಾರಿಕವಾಗಿಯಾಗಲೀ, ಆತನನ್ನು ತುಳಿಯಲು, ಆತನ ಮೇಲೆ ಅಧಿಕಾರ ಚಲಾಯಿಸಲು ನೋಡುತ್ತೇವೆಯೇ ಹೊರತು ಒಬ್ಬ ಮನುಷ್ಯನನ್ನಾಗಿ ನೋಡುವುದಿಲ್ಲ. ಹಾಗಾಗಿ ಇನ್ನೂ ಶತಮಾನಗಳು ಕಳೆದರೂ ಈ ಸನ್ನಿವೇಶದಲ್ಲಿನ ಸಂಭಾಷಣೆ, ‘ಬಡವರು, ಶ್ರೀಮಂತರು ಒಂದಾಗಿರೋದು ಈ ಜಗತ್ತಿನ ಚರಿತ್ರೆನಲ್ಲೇ ಇಲ್ಲ!’ ಸಾರ್ವಕಾಲಿಕ ಸತ್ಯವಾಗಿಯೇ ಉಳಿಯುತ್ತದೆ. ಧರಣಿ ಮಂಡಲ ಮಧ್ಯದೊಳಗೆ (1983) : ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಒಂದು ಪಾತ್ರ ದೇವರಿಗೆ ನೀನೇಕೆ ಕ್ರೂರಿ ಎಂದು ಕೇಳುತ್ತಾನೆ. ಆಗ ಅಶರೀರವಾಣಿ ಮನುಷ್ಯನ ಕಿರಿಮೆಗಳನ್ನು ಹೇಳುತ್ತಾ ನಾನಲ್ಲ ಕ್ರೂರಿ, ನೀನು ನಿನ್ನ ಸಮಾಜವೇ ಕ್ರೂರಿ ಎನ್ನುತ್ತದೆ.