
ನನ್ನನ್ನು ಪ್ರಭಾವಿಸಿದ ಐದು ಸಿನಿಮಾ ಪಾತ್ರಗಳು
ಚಾರ್ಲಿ ಚಾಪ್ಲಿನ್ : ಸರ್ಕಸ್, 1928 | ಬದುಕಿನಲ್ಲಿ ಏನೇ ಕಷ್ಟಗಳು ಬಂದರೂ ನಗುತ್ತಾ ಇದ್ದುದರಲ್ಲೇ ಹಂಚಿಕೊಂಡು ಬದುಕಿದ ಪಾತ್ರ. ಹಿರಣ್ಯಕಶಿಪು (ರಾಜಕುಮಾರ್) : ಭಕ್ತಪ್ರಹ್ಲಾದ, 1983 | ರೌಧ್ರರಸದ ಪರಮಾವಧಿಯಲ್ಲಿ ಮೂಡಿಬಂದ ಪಾತ್ರ ಅದು. ಅದರ ಮೂಲಕ ಬೇರೆ ಬೇರೆ ರಸಗಳನ್ನು ಆವಾಹಿಸಿಕೊಂಡು ಡಾ.ರಾಜಕುಮಾರ್ ಅಭಿನಯಿಸಿದ್ದು, ಹಿರಣ್ಯಕಶಿಪು ಪಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ರಾಮಾಚಾರಿ (ವಿಷ್ಣುವರ್ಧನ್) : ನಾಗರಹಾವು, 1972 | ಸದಾ ಆಕ್ರೋಷ, ಮುಂಗೋಪಿ ವ್ಯಕ್ತಿತ್ವದ ರಾಮಾಚಾರಿ ಹೃದಯವಂತ ಮತ್ತು ಹೆಣ್ಗರುಳಿನ ಯುವಕ. ತರಾಸು ಅಕ್ಷರಗಳ ಅನುಸಾರ ಪುಟ್ಟಣ್ಣ ಕಟ್ಟಿದ ಈ ಪಾತ್ರ ಅಚ್ಚುಮೆಚ್ಚು. ಲಂಬೋದರ ( ಅನಂತನಾಗ್) : ಗೌರಿಗಣೇಶ, 1991 | ಹಾಸ್ಯಮಿಶ್ರಿತ ಅಭಿನಯದ ಮೂಲಕ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸುತ್ತಾ ತನ್ನನ್ನು ಸರಿ ಎಂದು ಸಮರ್ಥಿಸಿಕೊಳ್ಳುವ ಪಾತ್ರವಿದು. ಇಂತಹ ವ್ಯಕ್ತಿಗಳು ನಮ್ಮ ಸುತ್ತಮುತ್ತ ಕಾಣಿಸುತ್ತಲೇ ಇರುತ್ತಾರೆ. ಅಪ್ಪುರಾಜಾ (ಕಮಲ ಹಾಸನ್) : ಅಪೂರ್ವ ಸಹೋದರರ್ಗಳ್, 1989 | ದೈಹಿಕ ನ್ಯೂನ್ಯತೆಗಳನ್ನು ಮೀರಿ ಜೀವನಪ್ರೀತಿಯಿಂದ ಬದುಕುವ, ಆಶಾವಾದಿ ಅಪ್ಪು ಪಾತ್ರ ನನ್ನಿಷ್ಟದ ಪಾತ್ರಗಳಲ್ಲೊಂದು.