ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಹಾಸ್ಯಚಕ್ರವರ್ತಿ

ಕನ್ನಡ ಚಿತ್ರರಂಗದ ಮೇರು ಚಿತ್ರನಿರ್ದೇಶಕ ಪುಟ್ಟಣ್ಣ ಕಣಗಾಲ್ ರಷ್ಯಾ ಚಿತ್ರೋತ್ಸವಕ್ಕೆ ಹೊರಟಿರುತ್ತಾರೆ. ಚಿತ್ರೋತ್ಸವಕ್ಕೆ ಅವರು ದಕ್ಷಿಣ ಭಾರತದ ಪ್ರತಿನಿಧಿ. ಆಗ ನಟಿ ಕಲ್ಪನಾ ಪುಟ್ಟಣ್ಣರಿಗೆಂದು ಮೈಸೂರಿನಲ್ಲಿ ವಿಶಿಷ್ಟ, ಆಪ್ತ ಔತಣಕೂಟ ಏರ್ಪಡಿಸುತ್ತಾರೆ. ಈ ಔತಣಕೂಟದಲ್ಲಿ ನಟ ನರಸಿಂಹರಾಜು ಅವರಿಗೆ ನಟಿ ಕಲ್ಪನಾ ಊಟ ಬಡಿಸಿದ ಸಂದರ್ಭವಿದು. ಚಿತ್ರನಿರ್ದೇಶಕ ನಾಗೇಶ್ ಬಾಬ ಅವರು ಫೋಟೋದಲ್ಲಿದ್ದಾರೆ. ಕನ್ನಡ ಚಿತ್ರರಂಗದ ಮೇರು ನಟ ನರಸಿಂಹರಾಜು (24/07/1923 – 11/07/1979) ಅವರ ಜನ್ಮದಿನವಿಂದು. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು