ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಿಹಿಕಹಿ ಚಂದ್ರು – 59

ಎಚ್‌.ಎಂ.ಕೆ.ಮೂರ್ತಿ ನಿರ್ಮಿಸಿ – ನಿರ್ದೇಶಿಸಿದ ‘ಸಿಹಿಕಹಿ’ ಧಾರಾವಾಹಿಯಲ್ಲಿ ಸಿಹಿಕಹಿ ಚಂದ್ರು ಮತ್ತು ಸಿಹಿಕಹಿ ಗೀತಾ. ದೂರದರ್ಶನದಲ್ಲಿ ಪ್ರಸಾರವಾದ ಮೊದಲ ಪ್ರಾಯೋಜಿತ ಧಾರಾವಾಹಿ ಇದು. 1985ರ ನವೆಂಬರ್‌ 1 ರಾಜ್ಯೋತ್ಸವದಂದು ಧಾರಾವಾಹಿಯ ಮೊದಲ ಸಂಚಿಕೆ ಮೂಡಿಬಂದಿತ್ತು. ಈ ಧಾರಾವಾಹಿ ಜನಪ್ರಿಯತೆಯೊಂದಿಗೆ ಚಂದ್ರಶೇಖರ್ ಅವರು ‘ಸಿಹಿಕಹಿ ಚಂದ್ರು’ ಎಂದೇ ಕರೆಸಿಕೊಂಡರು. ಕಿರುತೆರೆ, ರಂಗಭೂಮಿ ಮತ್ತು ಸಿನಿಮಾ ನಟ ಚಂದ್ರು ಅವರು ಇಂದು (ಜುಲೈ 23) ಐವತ್ತೊಂಬತ್ತನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು