ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪ್ರೊಫೆಸರ್ ಹುಚ್ಚೂರಾಯ

ಎಂ.ಆರ್‌.ವಿಠಲ್ ನಿರ್ದೇಶನದ ‘ಪ್ರೊಫೆಸರ್ ಹುಚ್ಚೂರಾಯ’ (1974) ಚಿತ್ರದಲ್ಲಿ ರಂಗಾ, ಭಾರ್ಗವಿ ನಾರಾಯಣ್‌, ಲೀಲಾವತಿ. ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ರಂಗಾ ಬೆಳ್ಳಿತೆರೆಗೆ ಪರಿಚಯವಾಗಿದ್ದು ‘ಮಾವನ ಮಗಳು’ (1965) ಚಿತ್ರದೊಂದಿಗೆ. ಮುಂದೆ ಹಣ್ಣೆಲೆ ಚಿಗುರಿದಾಗ, ನಕ್ಕರದೇ ಸ್ವರ್ಗ, ಮನಸ್ಸಿದ್ದರೆ ಮಾರ್ಗ, ಮಾರ್ಗದರ್ಶಿ… ಚಿತ್ರಗಳಲ್ಲಿ ಉತ್ತಮ ಪಾತ್ರಗಳನ್ನು ನಿರ್ವಹಿಸಿದರು. ‘ಪುನರ್ಜನ್ಮ’ ಚಿತ್ರದ ಅಭಿನಯಕ್ಕೆ ಶ್ರೇಷ್ಠ ಪೋಷಕ ನಟ ರಾಜ್ಯಪ್ರಶಸ್ತಿ ಲಭಿಸಿತು. 1973ರ ಜುಲೈ 23ರಂದು ಸ್ಕೂಟರ್ ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾದಾಗ ಅವರಿಗೆ 38 ವರ್ಷವಷ್ಟೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು