ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರಾಜೀವ್ ಕಪೂರ್ ನೆನಪು

ಹಿಂದಿ ಚಿತ್ರರಂಗದ ಮೇರು ನಟ, ನಿರ್ದೇಶಕ ರಾಜ್‌ಕಪೂರ್‌ ಅವರೊಂದಿಗೆ ಅವರ ತಾರಾ ಪುತ್ರರು – ರಣಧೀರ್‌ ಕಪೂರ್‌, ರಾಜೀವ್ ಕಪೂರ್‌ ಮತ್ತು ರಿಷಿ ಕಪೂರ್‌. ಹಿಂದಿ ಸಿನಿಮಾದ ಶೋಮ್ಯಾನ್‌ ಎಂದೇ ಕರೆಸಿಕೊಂಡ ರಾಜ್‌ಕಪೂರ್ ಅವರ ಕೊನೆಯ ಪುತ್ರ ರಾಜೀವ್‌ ಕಪೂರ್‌. ‘ಏಕ್‌ ಜಾನ್‌ ಹೈ ಹಮ್‌’ (1983) ಹಿಂದಿ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಅವರು ರಾಜ್‌ಕಪೂರ್‌ ನಿರ್ದೇಶನದ ‘ರಾಮ್‌ ತೇರಿ ಗಂಗಾ ಮೈಲಿ’ ಚಿತ್ರದ ಯಶಸ್ಸಿನೊಂದಿಗೆ ಸಿನಿಪ್ರಿಯರಿಗೆ ಚಿರಪರಿಚಿತರಾದರು. ಅಸ್ಮಾನ್‌, ಜಬರ್‌ದಸ್ತ್‌, ಹಮ್‌ ತೋ ಚಲೇ ಪರ್‌ದೇಸ್‌.. ಅವರ ನಟನೆಯ ಕೆಲವು ಪ್ರಮುಖ ಚಿತ್ರಗಳು. ಇಂದು ರಾಜೀವ್ ಕಪೂರ್ (25/08/1962 – 09/02/2021) ಅವರ ಜನ್ಮದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು