ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅವರ ಮನೆ ‘ವಿಶ್ವನಾಥ ಶೆಟ್ಟರ ಛತ್ರ’ ಎಂದೇ ಹೆಸರಾಗಿತ್ತು…

Share this post
ಪ್ರಗತಿ ಅಶ್ವತ್ಥ ನಾರಾಯಣ
ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ

ಕನ್ನಡ ಚಿತ್ರರಂಗ ಆಗಿನ್ನೂ ನೆಲೆ ಕಂಡುಕೊಳ್ಳುತ್ತಿದ್ದ ಸಂದರ್ಭ. ಅರಸೀಕೆರೆ ಮೂಲದ ವಿಶ್ವನಾಥ ಶೆಟ್ಟರು ಚಿತ್ರನಿರ್ಮಾಣಕ್ಕಿಳಿದು ಇತರರಿಗೆ ಪ್ರೇರಣೆಯಾದರು. ರಾಜಕುಮಾರ್ ವೃತ್ತಿ ಬದಕಿನ ಆರಂಭದ ದಿನಗಳ ನಾಲ್ಕು ಚಿತ್ರಗಳನ್ನು ಅವರು ನಿರ್ಮಿಸಿದ್ದಾರೆ.

ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಮಹನೀಯರಲ್ಲೊಬ್ಬರು ವಿಶ್ವನಾಥ ಶೆಟ್ರು. ಮೂಲತಃ ವರ್ತಕರಾಗಿದ್ದ ಅವರು ಅರಸೀಕೆರೆ ವಾಸಿ. ಅಲ್ಲೇ ವಾಸವಾಗಿದ್ದ ಶಂಕರ್ ಸಿಂಗ್, ವಿಠಲಾಚಾರ್ಯ ಅವರು ಶೆಟ್ಟರಿಗೆ ಆತ್ಮೀಯ ಸ್ನೇಹಿತರು. ಈ ಮೂವರು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದೂ ಇದೆ. ಈ ಸ್ನೇಹಿತರು ಇತರರೊಂದಿಗೆ ಸೇರಿ ಪಾಲುದಾರಿಕೆಯಲ್ಲಿ ‘ಮಹಾತ್ಮಾ ಪಿಕ್ಚರ್ಸ್’ ಸ್ಥಾಪಿಸಿ ಮೈಸೂರಿನಲ್ಲಿ ಕೆಲವು ಚಿತ್ರಗಳನ್ನು ತಯಾರಿಸಿದರು. ನಂತರದ ದಿನಗಳಲ್ಲಿ ಮೂವರೂ ಪ್ರತ್ಯೇಕವಾಗಿ ಮದರಾಸಿಗೆ ಸ್ಥಳಾಂತರಗೊಂಡು ಚಿತ್ರ ನಿರ್ಮಾಣ ಮಾಡಲು ಪ್ರಾರಂಭಿಸಿದರು.

ರಾಜಕುಮಾರ್ ರವರ ಚಿತ್ರ ಜೀವನದ ಪ್ರಾರಂಭಿಕ ಹಂತದ ಚಿತ್ರಗಳಾದ ‘ಸೋದರಿ’, ‘ಹರಿಭಕ್ತ’, ‘ಓಹಿಲೇಶ್ವರ’, ‘ಜಗಜ್ಯೋತಿ ಬಸವೇಶ್ವರ’ ನಿರ್ಮಾಣ ಮಾಡಿದರು. ಅವರ ನಿರ್ಮಾಣದ ಕೊನೆಯ ಸಿನಿಮಾ ‘ಭಾಗೀರಥಿ’. ಮದರಾಸಿನ ಅವರ ಮನೆ – ಕಚೇರಿ ‘ವಿಶ್ವನಾಥ ಶೆಟ್ಟರ ಛತ್ರ’ ಎಂದು ಹೆಸರುವಾಸಿಯಾಗಿತ್ತು. ಅಂದಿನ ದಿನಗಳಲ್ಲಿ ಕಾಣದ ಊರಾದ ಮದರಾಸಿನಲ್ಲಿ ಕನ್ನಡ ನಟರು ಹಾಗೂ ತಂತ್ರಜ್ಞರು ಬಹಳಷ್ಟು ಸಂಕಷ್ಟಕ್ಕೀಡಾಗುತ್ತಿದ್ದರು. ಅಂತಹ ಹಲವಾರು ಮಂದಿಗೆ ಶೆಟ್ಟರು ಊಟ, ವಸತಿ ನೀಡಿ ಆಶ್ರಯದಾತರಾಗಿದ್ದರು. ನಾನು 1965ರಲ್ಲಿ ಮದರಾಸಿನಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕನಾಗಿ ಕೆಲಸ ಮಾಡಲು ಶುರುಮಾಡಿದಾಗ ನನ್ನ ಹಿರಿಯ ಸಹೋದ್ಯೋಗಿಗಳು ಇವೆಲ್ಲವನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಅವರು ಇಳಿವಯಸ್ಸಿನಲ್ಲಿ ಗಾಂಧಿನಗರದ ನಮ್ಮ ಪ್ರಗತಿ ಸ್ಟುಡಿಯೋಗೆ ಅಗಾಗ್ಗೆ ಬರುತ್ತಿದ್ದರು. ನನ್ನ ಅಣ್ಣ ನಾಗೇಶ್ ಬಾಬ ಅವರೊಂದಿಗೆ ಪ್ರಸ್ತುತ ಚಿತ್ರರಂಗದ ಆಗುಹೋಗುಗಳ ವಿಚಾರ ಮಾತನಾಡುತ್ತಿದ್ದರು. ಇಂತಹ ಹಲವಾರು ಮಹನೀಯರಿಂದ ಕನ್ನಡ ಚಿತ್ರರಂಗ ರೂಪುಗೊಂಡಿತು.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ