ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಂಗೀತ ಸಂಯೋಜಕ ಆರ್.ಕೆ.ಶೇಖರ್

ಸಂಗೀತ ಸಂಯೋಜಕರಾದ ಅರ್‌.ಕೆ.ಶೇಖರ್‌, ದಕ್ಷಿಣಮೂರ್ತಿ ಸ್ವಾಮಿ, ಗಾಯಕ ಯೇಸುದಾಸ್‌ ಇತರರು. ಭಾರತ ಸಿನಿಮಾಸಂಗೀತದಲ್ಲಿ ಸಂಚಲನ ಸೃಷ್ಟಿಸಿದ ಎ.ಆರ್.ರೆಹಮಾನ್‌ ಅವರ ತಂದೆ ಆರ್‌.ಕೆ.ಶೇಖರ್. ರಂಗಭೂಮಿಯಲ್ಲಿ ಹಾರ್ಮೋನಿಯಂ ವಾದಕರಾಗಿ ಅವರು ಸಂಗೀತಯಾನ ಶುರುವಾಯ್ತು. ‘ಪಝಾಸ್ಸಿ ರಾಜ’ (1964) ಮಲಯಾಳಂ ಚಿತ್ರದೊಂದಿಗೆ ಶೇಖರ್‌ ಸಿನಿಮಾಸಂಗೀತಕ್ಕೆ ಪರಿಚಯವಾದರು. ಮಲಯಾಳಂ, ತಮಿಳಿನ 50ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದು, 100ಕ್ಕೂ ಹೆಚ್ಚು ಚಿತ್ರಗಳಿಗೆ ಅವರು ಮ್ಯೂಸಿಕ್ ಕಂಡಕ್ಟರ್‌ ಆಗಿ ಕೆಲಸ ಮಾಡಿದ್ದಾರೆ. ಅಕಾಲಿಕವಾಗಿ ಇಹಲೋಕ ತ್ಯಜಿಸಿದಾಗ ಶೇಖರ್ (21/06/1933 – 30/09/1976) ಅವರಿಗೆ 43 ವರ್ಷವಷ್ಟೆ. ಇಂದು (ಜೂನ್‌ 21) ಅವರ ಜನ್ಮದಿನ. (Photo Courtesy: KJ Yesudas Fans)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು