ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಗುಬ್ಬಿ ವೀರಣ್ಣ ನೆನಪು

ಬೆಂಗಳೂರು ಕಂಠೀರವ ಸ್ಟುಡಿಯೋ ಎದುರು ರಂಗದಿಗ್ಗಜ, ಚಿತ್ರಕರ್ಮಿ ಗುಬ್ಬಿ ವೀರಣ್ಣನವರು. ಕನ್ನಡ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ ಮಹನೀಯರೊಲ್ಲಬ್ಬರು ಗುಬ್ಬಿ ವೀರಣ್ಣ. ಆರನೇ ವಯಸ್ಸಿನಲ್ಲೇ ರಂಗಕ್ಕೆ ಪಾದಾರ್ಪಣೆ ಮಾಡಿದ ವೀರಣ್ಣ ಗುಬ್ಬಿ ಚನ್ನಬಸವೇಶ್ವರ ಕಂಪನಿಯ ಆಧಾರ ಸ್ತಂಭವಾಗಿ ವೃತ್ತಿರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮೇರು ಸಾಧಕ. ಮೂಕಿ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿದ ಅವರು ಮುಂದೆ ಟಾಕಿ ಯುಗದಲ್ಲೂ ಹಲವು ಪ್ರಯೋಗಗಳೊಂದಿಗೆ ಚಿತ್ರರಂಗಕ್ಕೆ ದುಡಿದರು. ನಟ, ನಿರ್ದೇಶಕ, ನಿರ್ಮಾಪಕ, ವಿತರಕ, ಚಿತ್ರಪ್ರದರ್ಶಕರಾಗಿ ವಿವಿಧ ವಿಭಾಗಗಳಲ್ಲಿ ದುಡಿದ ಅವರು ಕಂಠೀರವ ಸ್ಟುಡಿಯೋ ಸ್ಥಾಪನೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಗುಬ್ಬಿ ಕಂಪನಿ ಮೂಲಕ ನೂರಾರು ಕಲಾವಿದರು ಹಾಗೂ ತಂತ್ರಜ್ಞರು ಬೆಳಕಿಗೆ ಬಂದಿದ್ದಾರೆ. ಇಂದು ಗುಬ್ಬಿ ವೀರಣ್ಣನವರ (24/01/1891 – 18/10/1972) ಸಂಸ್ಮರಣಾ ದಿನ. (ಫೋಟೊ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು