ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಹೃಷಿಕೇಶ್ ಮುಖರ್ಜಿ ನೆನಪು

‘ಸತ್ಯಕಾಮ್‌’ (1969) ಹಿಂದಿ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಿರ್ದೇಶಕ ಹೃಷಿಕೇಶ್ ಮುಖರ್ಜಿ, ನಟ ಧರ್ಮೇಂದ್ರ ಮತ್ತು ನಟಿ ಶರ್ಮಿಳಾ ಟ್ಯಾಗೂರ್‌. ಭಾರತೀಯ ಸಿನಿಮಾದ ಪ್ರಮುಖ ಚಿತ್ರನಿರ್ದೇಶಕರಲ್ಲೊಬ್ಬರು ಹೃಷಿಕೇಶ್ ಮುಖರ್ಜಿ. ಶ್ರೇಷ್ಠ ಸಂಕಲಕಾರರೂ ಹೌದು. ವ್ಯಾಪಾರಿ ಮತ್ತು ಕಲಾತ್ಮಕ ಮಾದರಿ ಎರಡನ್ನೂ ಬೆಸೆಯುವ ಕತೆ, ನಿರೂಪಣೆಯೊಂದಿಗೆ ಹೊಸ ಮಾರ್ಗ ಕಂಡುಕೊಂಡವರು ಮುಖರ್ಜಿ. ರಾಷ್ಟ್ರಪ್ರಶಸ್ತಿ, ಫಿಲ್ಮ್‌ಫೇರ್‌ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆ ಗೌರವಗಳಿಗೆ ಪಾತ್ರರಾಗಿದ್ದಾರೆ. ಅನಾರಿ ಸತ್ಯಕಾಮ್‌, ಚುಪ್ಕೆ ಚುಪ್ಕೆ, ಅನುಪಮಾ, ಆನಂದ್, ಅಭಿಮಾನ್‌, ಗುಡ್ಡಿ, ಗೋಲ್‌ಮಾಲ್‌, ಚೈತಾಲಿ, ಆಶೀರ್ವಾದ್‌, ಬಾವರ್ಚಿ, ಖೂಬಸೂರತ್‌, ಕಿಸ್ಸಿಸೇ ನಾ ಕೆಹ್ನಾ… ಅವರ ನಿರ್ದೇಶನದ ಕೆಲವು ಪ್ರಮುಖ ಚಿತ್ರಗಳು. ಇಂದು ಹೃಷಿಕೇಶ್ ಮುಖರ್ಜಿ (30/09/1922 – 27/08/2006) ಜನ್ಮದಿನ. (Photo Courtesy: Film History Pics)

Share this post