`ಸ್ವರ್ಣಗೌರಿ’ (1962) ಸಿನಿಮಾ ಚಿತ್ರೀಕರಣದ ಬಿಡುವಿನ ಸಂದರ್ಭ. ಹಾಸ್ಯನಟ ರತ್ನಾಕರ್, ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ, ನಟ ರಾಜಕುಮಾರ್, ಕರೀಂಖಾನ್ (ಜುಬ್ಬಾ ಪಾಯಿಜಾಮ ಹಾಕಿದವರು) ಇದ್ದಾರೆ. `ಸ್ವರ್ಣಗೌರಿ’ ಚಿತ್ರಕ್ಕೆ ಕರೀಂಖಾನ್ ಸಂಭಾಷಣೆ ಮತ್ತು ಹಾಡುಗಳನ್ನು ಬರೆದಿದ್ದರು. ಜನಪದ ಸಾಹಿತ್ಯದಲ್ಲಿ ದೊಡ್ಡ ಕೆಲಸ ಮಾಡಿರುವ ಕರೀಂಖಾನ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡವರು. ಸಿನಿಮಾದೆಡೆ ಆಸಕ್ತರಾದ ಅವರು ನೂರಕ್ಕೂ ಹೆಚ್ಚು ಅರ್ಥಪೂರ್ಣ ಗೀತೆಗಳು ಹಾಗೂ ಹಲವು ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ಸ್ವರ್ಣಗೌರಿ, ಗಂಗೆಗೌರಿ, ಚಂದ್ರಕುಮಾರ, ಶಿವಲಿಂಗಸಾಕ್ಷಿ, ಜೀವನ ತರಂಗ, ಬೇವುಬೆಲ್ಲ, ಪ್ರೇಮ ಅನುರಾಗ, ವಸಂತ ನಿಲಯ, ರಾಜೇಶ್ವರಿ, ದೊಂಬರ ಕೃಷ್ಣ, ಮಾನಸ ಸರೋವರ ಮತ್ತಿತರ ಸಿನಿಮಾಗಳಿಗೆ ಕರೀಂಖಾನ್‌ರ ಅರ್ಥಗರ್ಭಿತ ಸಾಹಿತ್ಯವಿದೆ.

ಸ್ವರ್ಣಗೌರಿ – ಕರೀಂಖಾನ್
- ಕನ್ನಡ ಸಿನಿಮಾ
Share this post