ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮೂವಿಂಗ್ ಶಾಟ್!

ಪೋಸ್ಟ್ ಶೇರ್ ಮಾಡಿ

ಈಗ ಸಿನಿಮಾ, ಕಿರುತೆರೆ ಚಿತ್ರೀಕರಣಗಳಲ್ಲಿ ಜಿಮ್ಮೀ ಜಿಬ್ ಸೇರಿದಂತೆ ಆಧುನಿಕ ಪರಿಕರಗಳಿಂದ ಮೂವಿಂಗ್‌ -ಏರಿಯಲ್ ಶಾಟ್‌ಗಳನ್ನು ಚಿತ್ರಿಸುತ್ತಾರೆ. ಸೌಲಭ್ಯಗಳಿಲ್ಲದ ಆಗ ಏನೇನೋ ಐಡಿಯಾಗಳನ್ನು ಮಾಡಬೇಕಿತ್ತು. ಇದು ಬೆಂಗಳೂರಿನ ಓಪನ್ ಏರ್ ಥಿಯೇಟರ್ ನಲ್ಲಿ ನಡೆದ ‘ಪ್ರೇಮಾಯಣ’ (1978) ಶೂಟಿಂಗ್ ಸಂದರ್ಭ. ಕಾರಿನ ಡೋರ್‌ನ ಎರಡೂ ಬದಿ ಕಾಲು ಹಾಕಿ ಕ್ಯಾಮೆರಾ ಹಿಡಿದಿರೋದು ಛಾಯಾಗ್ರಾಹಕ ಯು.ಎಂ.ಎನ್.ಷರೀಫ್. ಅವರನ್ನು ಒಳಗಿನಿಂದ ಸಹಾಯಕರೊಬ್ಬರು ಬಳಸಿ ಹಿಡಿದಿದ್ದರೆ, ಮುಂದೊಬ್ಬರು ಸೂಚನೆ ನೀಡುತ್ತಿದ್ದಾರೆ.

ಛಾಯಾಗ್ರಾಹಕ ಷರೀಫ್ ಚಿತ್ರದುರ್ಗದವರು. ಪುಣೆಯ ಫಿಲಂ ಮತ್ತು ಟೆಲಿವಿಷನ್ ಸಂಸ್ಥೆಯ ಡಿಪ್ಲೊಮಾ ಪದವೀಧರ. ಆ ಅವಧಿಯಲ್ಲಿ ಹಿಂದಿ ನಟಿ ಜಯಾ ಬಾಧುರಿ ಇವರ ಕ್ಲಾಸ್‌ಮೇಟ್ ಆಗಿದ್ದರಂತೆ. ಷರೀಫ್ ಛಾಯಾಗ್ರಹಣ ಮಾಡಿದ ಮೊದಲ ಸಿನಿಮಾ ಬಿ.ವಿ.ಕಾರಂತ ಮತ್ತು ಗಿರೀಶ್ ಕಾರ್ನಾಡ್ ನಿರ್ದೇಶನದ ‘ವಂಶವೃಕ್ಷ’ (1972). ಕೆ.ಎಂ.ಶಂಕರಪ್ಪ ನಿರ್ದೇಶನದ ‘ಮಾಡಿ ಮಡಿದವರು’ (1974) ಸಿನಿಮಾದ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಷರೀಫ್ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಖ್ಯಾತ ಛಾಯಾಗ್ರಾಹಕ ಎಸ್.ರಾಮಚಂದ್ರ ಅವರು ಷರೀಫರಿಗೆ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿದ್ದು. ಷರೀಫ್‌ ಹಲವು ಸಾಕ್ಷ್ಯಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ.

(ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಇನ್ನಷ್ಟು ಕಥೆ

ಹೆಳವನಕಟ್ಟೆ ಗಿರಿಯಮ್ಮ

ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ

ಕನ್ನಯ್ಯರಾಮ – ಅನಂತನಾಗ್‌

ಆಗಿನ್ನೂ ಅನಂತನಾಗ್ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿರಲಿಲ್ಲ. ‘ಅಂಕುರ್’, ‘ನಿಶಾಂತ್’, ‘ಮಂಥನ್’ ಹಿಂದಿ ಸಿನಿಮಾಗಳು

ಜನಪ್ರಿಯ ಪೋಸ್ಟ್ ಗಳು

‘ಬಿಳಿ ಹೆಂಡ್ತಿ’ ಮಾರ್ಗರೆಟ್

ಅಮೆರಿಕ ಮೂಲದ ಮಾರ್ಗರೆಟ್ ಥಾಮ್ಸನ್ ‘ಬಿಳಿ ಹೆಂಡ್ತಿ’ ಚಿತ್ರಕ್ಕೆ ಆಯ್ಕೆಯಾದದ್ದು ಆಕಸ್ಮಿಕ. ಹದಿನೆಂಟರ ಹರೆಯದ ಮಾರ್ಗರೆಟ್ ಆಗ ‘ಭಾರತದ ಗ್ರಾಮೀಣ

ಬೆಟ್ಟದ ಕಳ್ಳ

ಕೊಯಮತ್ತೂರಿನ ಪಕ್ಷಿರಾಜ ಸ್ಟುಡಿಯೋದಲ್ಲಿ ‘ಬೆಟ್ಟದ ಕಳ್ಳ’ (1957) ಚಿತ್ರೀಕರಣದ ಸಂದರ್ಭ. ನಿರ್ದೇಶಕ ಶ್ರೀರಾಮುಲು ನಾಯ್ಡು ಅವರು ಚಿತ್ರದ ಕಲಾವಿದರಾದ ಆರ್.ನಾಗೇಂದ್ರರಾಯರು

ಕುವೆಂಪು ಒಪ್ಪಿಗೆ ಪತ್ರ

‘ಅನಿರೀಕ್ಷಿತ’ (1970) ಸಿನಿಮಾದಲ್ಲಿ ಕುವೆಂಪು ರಚನೆಯ ‘ಸೊಬಗಿನ ಸೆರೆಮನೆಯಾಗಿಹೆ ನೀನು…’ ಗೀತೆ ಬಳಕೆಯಾಗಿದೆ. ಕುವೆಂಪು ಅವರ ‘ಷೋಡಶಿ’ ಕವನಸಂಕಲನದಲ್ಲಿನ ಪದ್ಯವಿದು.